ADVERTISEMENT

Photos | ಆರ್‌.ಆರ್‌.ನಗರ ಉಪಚುನಾವಣೆ: ಮತದಾನ ನಡೆಸಿದ ಕೊರೊನಾ ವೈರಸ್‌ ಸೋಂಕಿತ

ಆರ್‌.ಆರ್‌.ನಗರ ವಿಧಾನಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಕೋವಿಡ್‌–19 ದೃಢಪಟ್ಟಿರುವ ಮತದಾರರಿಗೂ ಹಕ್ಕು ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆರ್‌.ಆರ್‌.ನಗರದ ಬಿಇಟಿ ಕಾನ್ವೆಂಟ್‌ ಮತಕೇಂದ್ರದಲ್ಲಿ ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿಯೊಬ್ಬರು ಮತದಾನ ಮಾಡಿದರು. ಸೋಂಕಿತ ವ್ಯಕ್ತಿ ಮತದಾನಕ್ಕೆ ಬರುವುದಕ್ಕೂ ಮುನ್ನ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮತಗಟ್ಟೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.ಆರ್‌.ಆರ್‌.ನಗರ ಬಿಬಿಎಂಪಿ ಜಂಟಿ ಆಯುಕ್ತ ನಾಗರಾಜ್‌ ಅವರೂ ಸ್ಥಳದಲ್ಲಿದ್ದರು. ಆಂಬ್ಯುಲೆನ್ಸ್‌ನಲ್ಲಿ ಬಂದ ಕೊರೊನಾ ಸೋಂಕಿತ ವ್ಯಕ್ತಿ ಮತದಾನ ನಡೆಸಿದರು. ಮತಕೇಂದ್ರದ ಚುನಾವಣಾ ಅಧಿಕಾರಿಗಳು, ಮತದಾರ ಪಿಪಿಇ ಕಿಟ್‌ ಧರಿಸಿದ್ದರು.ಚಿತ್ರಗಳು: ಪ್ರಜಾವಾಣಿ/ ಅನೂಪ್‌ ರಾಗ್‌.ಟಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 14:00 IST
Last Updated 3 ನವೆಂಬರ್ 2020, 14:00 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.