ADVERTISEMENT

ಕೋವಿಡ್‌ ಲಸಿಕೆ : ತಾಲೀಮು ಇಂದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 21:15 IST
Last Updated 7 ಜನವರಿ 2021, 21:15 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ ಬಗ್ಗೆ ಇದೇ ಶುಕ್ರವಾರ ವಿಶೇಷ ತಾಲೀಮು ಏರ್ಪಡಿಸಲಾಗಿದೆ.

ಎಂಟು ವಲಯಗಳ ಸಾರ್ವಜನಿಕ ಆರೋಗ್ಯ ಕೇಂದ್ರ, ರೆಫೆರಲ್ ಆಸ್ಪತ್ರೆ, ಮೆಡಿಕಲ್ ಕಾಲೇಜು, ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ತಾಲೀಮು ಬೆಳಗ್ಗೆ 9ರಿಂದ 11ರವರೆಗೆ ನಡೆಯಲಿದೆ ಎಂದು ಪಾಲಿಕೆ ಮುಖ್ಯ ಆರೊಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ತಿಳಿಸಿದ್ದಾರೆ.

ಲಸಿಕೆ ತಾಲೀಮು ನಡೆಸಲು ಪ್ರತಿ ವಲಯದಲ್ಲಿ ತಲಾ ಒಂದು ಸ್ಥಳವನ್ನು ಗೊತ್ತುಪಡಿಸಲಾಗಿದೆ.

ADVERTISEMENT

ಲಸಿಕೆ ತಾಲೀಮು ನಡೆಯುವ ಸ್ಥಳಗಳು

ವಲಯ; ಸ್ಥಳ

ಬೊಮ್ಮನಹಳ್ಳಿ: ಸಿಂಗಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ

ದಾಸರಹಳ್ಳಿ: ಸಪ್ತಗಿರಿ ವೈದ್ಯಕೀಯ ಕಾಲೇಜು

ಪೂರ್ವ: ಹಲಸೂರು ರೆಫೆರಲ್ ಆಸ್ಪತ್ರೆ

ಮಹದೇವಪುರ: ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ

ಆರ್.ಆರ್‌.ನಗರ: ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರ

ದಕ್ಷಿಣ: ಕಿಮ್ಸ್ ವೈದ್ಯಕೀಯ ಕಾಲೇಜು

ಪಶ್ಚಿಮ: ಬೆಂಗಳೂರು ವೈದ್ಯಕೀಯ ಕಾಲೇಜು

ಯಲಹಂಕ: ಆ್ಯಸ್ಟರ್ ಸಿಎಂಐ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.