ADVERTISEMENT

ಹೊಟೇಲ್‌ಗಳಲ್ಲಿ ಕ್ವಾರಂಟೈನ್:ಇಲ್ಲಿದೆ ಬಿಬಿಎಂಪಿ ದರಪಟ್ಟಿ, ದಿನಕ್ಕೆ ಕನಿಷ್ಠ ₹750

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2020, 10:01 IST
Last Updated 18 ಮೇ 2020, 10:01 IST
ವ್ಯಕ್ತಿಯೊಬ್ಬರಿಗೆ ಕ್ವಾರಂಟೈನ್‌ ಮುದ್ರೆ ಹಾಕಿರುವುದು– ಸಂಗ್ರಹ ಚಿತ್ರ
ವ್ಯಕ್ತಿಯೊಬ್ಬರಿಗೆ ಕ್ವಾರಂಟೈನ್‌ ಮುದ್ರೆ ಹಾಕಿರುವುದು– ಸಂಗ್ರಹ ಚಿತ್ರ   
""

ಬೆಂಗಳೂರು: ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವವರ ಪೈಕಿ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗುವವರಿಗೆ ಬಿಬಿಎಂಪಿ ಹೊಟೇಲ್‌ ದರ ನಿಗದಿ ಪಡಿಸಿದ್ದು, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ ಕುಮಾರ್ ದರ ಪಟ್ಟಿ ಹಂಚಿಕೊಂಡಿದ್ದಾರೆ.

ಕ್ವಾರಂಟೈನ್‌ಗಾಗಿ ವಿವಿಧ ವರ್ಗಗಳ ಹೊಟೇಲ್‌ಗಳನ್ನು ನಿಗದಿ ಪಡಿಸಿರುವ ಬಿಬಿಎಂಪಿ ಅದಕ್ಕೆ ತಕ್ಕ ದರ ಗೊತ್ತು ಪಡಿಸಿದೆ. ಹೊರಗಿನಿಂದ ಬಂದವರು ಇಚ್ಛೆ ಪಟ್ಟ ವರ್ಗದ ಹೊಟೇಲ್‌ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಲಭ್ಯತೆ ಆಧಾರದ ಮೇಲೆ ಅಧಿಕಾರಿಗಳು ಕ್ವಾರಂಟೈನ್‌ಗೆ ಒಳಗಾಗಬೇಕಾದ ಹೊಟೇಲ್‌ ನಿಗದಿಪಡಿಸುತ್ತಾರೆ.ರೂಂ ದರ ದಿನಕ್ಕೆ ₹3000ದಿಂದ ₹750ರ ವರೆಗೂ ಇದೆ.

ಪಂಚ ತಾರಾ ಹೊಟೇಲ್‌, 4–3 ಸ್ಟಾರ್‌ ಹೊಟೇಲ್‌ಗಳು, ಸಾಮಾನ್ಯ ಹಾಗೂ ಕಡಿಮೆ ದರದ ಹೊಟೇಲ್‌ಗಳಿಗೆ ಬೇರೆ ಬೇರೆ ದರ ನಿಗದಿಯಾಗಿದೆ. ಒಬ್ಬರಿಗೆ ಮತ್ತು ದಂಪತಿಗೆ ಪ್ರತ್ಯೇಕ ದರವಿದ್ದು, ಪಂಚ ತಾರಾ ಹೊಟೇಲ್‌ಗಳಲ್ಲಿ ಒಂದು ಹೊತ್ತಿನ ಊಟಕ್ಕೆ ₹500–₹550 ನೀಡಬೇಕು.

ADVERTISEMENT

ಕಡಿಮೆ ದರದ ಹೊಟೇಲ್‌ಗಳಲ್ಲಿ ದಂಪತಿಗೆ ತಿಂಡಿ, ಊಟ ಮತ್ತು ತೆರಿಗೆ ಸೇರಿ ₹900 ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.