ADVERTISEMENT

ಕ್ರಿಕೆಟ್ ಬೆಟ್ಟಿಂಗ್: 10 ಮಂದಿಯ ಬಂಧನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 8:04 IST
Last Updated 1 ಫೆಬ್ರುವರಿ 2020, 8:04 IST
ಕ್ರಿಕೆಟ್‌ ಬೆಟ್ಟಿಂಗ್
ಕ್ರಿಕೆಟ್‌ ಬೆಟ್ಟಿಂಗ್   

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಶುಕ್ರವಾರ ನಡೆದ ಟಿ20 ಕ್ರಿಕೆಟ್ ಪಂದ್ಯದ ವೇಳೆ ನಗರದ ಲಾವೆಲ್ಲೆ ರಸ್ತೆಯಲ್ಲಿರುವ ಹ್ಯಾಂಗ್ಔಟ್ ಕ್ಲಬ್ ನಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ 10 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚೇತನ್, ಅರವಿಂದ್, ನಿತಿನ್, ಮಹಮ್ಮದ್ ಫಹಾದ್, ನವೀನ್, ಲಕ್ಷ್ಮಣ್ ದಾಸ್, ಪ್ರತೀಕ್, ಪವನ್, ಕಿಶನ್ ಮತ್ತು ವೈಭವ್ ಬಂಧಿತರು.

ಬಂಧಿತರಿಂದ 87,200 ರೂಪಾಯಿ ನಗದು, 10 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.