ಕೆ.ಆರ್.ಪುರ: ಕ್ಷೇತ್ರದ ಜನರು ಶಾಂತಿ ಸೌಹಾರ್ದತೆಯಿಂದ ಬಾಳಲು, ನೆಮ್ಮದಿಯ ನಾಳೆಗಾಗಿ ಅಪರಾಧ ಮುಕ್ತ ಕೆ.ಆರ್.ಪುರವನ್ನು ಮಾಡಲು ಪ್ರತಿಯೊಬ್ಬರೂ ಪಣತೊಡಬೇಕು ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಕೇಂಬ್ರಿಜ್ ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ‘ಅಪರಾಧ ಮುಕ್ತ ಕೆ.ಆರ್.ಪುರ’ ಮ್ಯಾರಥಾನ್ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಕೆ.ಆರ್.ಪುರ ಅಪರಾಧ ಚಟುವಟಿಕೆಗಳ ತಾಣವಾಗಿದೆ. ಅವುಗಳನ್ನು ಮಟ್ಟ ಹಾಕಲು ಯುವಕರು ಮುಂದಾಗಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್ ಮಾತನಾಡಿ, ‘ಸಮಾಜದಲ್ಲಿ ಮುಂಚೂಣಿ ಸ್ಥಾನದಲ್ಲಿ ಇರುವವರೇ ಅಪರಾಧ ಮಾಡುತ್ತಿದ್ದಾರೆ’ ಎಂದರು.
ಕೆ.ಆರ್. ಪುರದ ಐಟಿಐ ಮೈದಾನದಿಂದ ಐದು ಕಿ.ಮೀ. ಮತ್ತು ಎಂಟು ಕಿ.ಮೀ. ಮ್ಯಾರಥಾನ್ ನಡೆಯಿತು. ಓಟದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ರಾಜ್ಯಸಭೆಯ ಮಾಜಿ ಸದಸ್ಯ ಎಂ.ವಿ. ರಾಜೀವ್ ಗೌಡ, ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್, ಮುಖಂಡರಾದ ಅಗರ ಪ್ರಕಾಶ್, ಚನ್ನಕೇಶವ, ವೀರಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.