ADVERTISEMENT

ಸಿಐಡಿ: ಕಣ್ವ ಸಮೂಹ ಸಂಸ್ಥೆಯ ₹426 ಕೋಟಿ ಆಸ್ತಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 20:25 IST
Last Updated 16 ಡಿಸೆಂಬರ್ 2020, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ, ನಿಶ್ಚಿತ ಠೇವಣಿ ಹೆಸರಿನಲ್ಲಿ ಕೋಟ್ಯಂತರ ಹಣ ಸಂಗ್ರಹಿಸಿ, ವಂಚಿಸಿರುವ ಆರೋಪದಡಿ ಕಣ್ವ ಸಮೂಹ ಸಂಸ್ಥೆಗೆ ಸೇರಿರುವ ₹426.19 ಕೋಟಿ ಮೌಲ್ಯದ111 ಆಸ್ತಿಗಳನ್ನು ಸಿಐಡಿ ಜಪ್ತಿ ಮಾಡಿದೆ.

ವಂಚನೆ ಸಂಬಂಧಕಣ್ವ ಸೌಹಾರ್ದಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಅಧ್ಯಕ್ಷ ಎನ್.ನಂಜುಂಡಯ್ಯ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು.

‘ಪ್ರಕರಣದಲ್ಲಿ ಬಂಧಿಸಲಾಗಿರುವ ಎನ್.ನಂಜುಂಡಯ್ಯ ಅವರುಸಂಸ್ಥೆಯ ನಿರ್ದೇಶಕರು ಹಾಗೂ ಸಿಬ್ಬಂದಿಯೊಂದಿಗೆ ಸೇರಿಕೊಂಡು ವಂಚನೆ ಮಾಡಿದ್ದಾರೆ.ಹೂಡಿಕೆ ಮಾಡಿಕೊಂಡ ಹಣವನ್ನು ಕಣ್ಣ ಹೆಸರಿನಲ್ಲಿ ಬೇರೆ ಸಂಸ್ಥೆಗಳ ಖಾತೆಗಳಿಗೆ ಜಮಾ ಮಾಡಿಕೊಂಡು, ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವ ಮೂಲಕ ಜನರನ್ನು ವಂಚಿಸಿದ್ದಾರೆ. ಆ ಹಣದಿಂದ ರಾಜ್ಯದ ವಿವಿಧೆಡೆ ಆಸ್ತಿಗಳನ್ನು ಸಂಪಾದಿಸಿದ್ದರು. ಇವುಗಳ ಮಾಹಿತಿ ಆಧರಿಸಿ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಐಡಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರ ವಿರುದ್ಧ ಏಳು ಪ್ರಕರಣಗಳು ದಾಖಲಾಗಿರುವುದು ಗೊತ್ತಾಯಿತು.ಸಾರ್ವಜನಿಕರು ದಾಖಲಾತಿಗಳೊಂದಿಗೆ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಇವುಗಳನ್ನು ಒಟ್ಟುಗೂಡಿಸಿ, ಹೂಡಿಕೆ ಮಾಡಿರುವ ಮೊತ್ತ ಪತ್ತೆ ಮಾಡಬೇಕಿದೆ’.

ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವವರು ತನಿಖಾಧಿಕಾರಿ ಮಹಮ್ಮದ್‌ ರಫಿ (080–22094417) ಅವರನ್ನು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.