ADVERTISEMENT

ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ, ಒಂದೇ ವರ್ಷ 153 ಅತ್ಯಾಚಾರ ಪ್ರಕರಣ

ಒಂದು ವರ್ಷದ ಅವಧಿಯಲ್ಲಿ , ಸೈಬರ್ ವಂಚನೆ ಪ್ರಕರಣ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 4:02 IST
Last Updated 5 ಜನವರಿ 2023, 4:02 IST
ಬೆಂಗಳೂರು ನಗರ
ಬೆಂಗಳೂರು ನಗರ   

ಬೆಂಗಳೂರು: ಮೂರು ವರ್ಷಕ್ಕೆ ಹೋಲಿಸಿದರೆ, 2022ನೇ ಸಾಲಿನಲ್ಲಿ ಕೊಲೆ, ಸುಲಿಗೆ, ಡಕಾಯಿತಿ, ಸರ ಅಪಹರಣ, ಮನೆಯಲ್ಲಿದ್ದ ಚಿನ್ನಾಭರಣ ಕಳವು, ವಾಹನ ಕಳವು ಪ್ರಕರಣಗಳು ಇಳಿಕೆ ಕಂಡಿದ್ದರೂ ಸಿಲಿಕಾನ್‌ ಸಿಟಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಪ್ರಕರಣಗಳು ಈ ಸಾಲಿನಲ್ಲಿ ಏರಿಕೆಯಾಗಿವೆ.

‘ವರದಕ್ಷಿಣೆ ಕಾಯ್ದೆ, ಪೋಕ್ಸೊ, ದೌರ್ಜನ್ಯ ಸೇರಿದಂತೆ ಇತರೆ ಪ್ರಕರಣಗಳು ಶೇ 30ರಷ್ಟು ಏರಿಕೆಯಾಗಿವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ಮಹಿಳೆಯರು ಹಾಗೂ ಯುವತಿಯರಲ್ಲಿ ಹೆಚ್ಚು ಜಾಗೃತಿ ಮೂಡಿದ್ದು, ದೌರ್ಜನ್ಯಕ್ಕೆ ಒಳಗಾದವರು ಪ್ರಕರಣ ದಾಖಲಿಸುತ್ತಿದ್ದಾರೆ. ಇದರಿಂದ ಪ್ರಕರಣಗಳು ಏರಿಕೆಯಾಗಿವೆ’ ಎಂದರು.

ADVERTISEMENT

‘ಕಳೆದ ವರ್ಷ ಹಿಜಾಬ್‌ ಸಂಬಂಧದ ಗಲಾಟೆ, ಕಾರ್ಮಿಕ, ರೈತರ ಹಾಗೂ ಸಂಘ ಸಂಸ್ಥೆಗಳಿಂದ ನಗರದಲ್ಲಿ ಒಟ್ಟು 500 ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಪುನೀತ್‌ರಾಜ್‌ಕುಮಾರ್‌ ಪುಣ್ಯ ಸ್ಮರಣೆ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ಮೇಕೆದಾಟು ಪಾದಯಾತ್ರೆ, ಚಾಮರಾಜಪೇಟೆ ಮೈದಾನ ವಿಚಾರದಲ್ಲಿ ಉತ್ತಮವಾಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು’ ಎಂದು ತಿಳಿಸಿದರು.

‘ವೈಯಕ್ತಿಕ, ಕೌಟುಂಬಿಕ, ಆಸ್ತಿ, ಅನೈತಿಕ ಸಂಬಂಧ ಕಾರಣಕ್ಕೆ ಕೊಲೆಗಳು ನಡೆದಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಡಕಾಯಿತಿಯಲ್ಲಿ ಶೇ 41ರಷ್ಟು, ಸುಲಿಗೆ ಶೇ 6, ಸರ ಅಪಹರಣ ಶೇ 33, ಮನೆ ಕನ್ನ ಪ್ರಕರಣದಲ್ಲಿ ಶೇ 31ರಷ್ಟು ಇಳಿಕೆಯಾಗಿವೆ. ಈ ವರ್ಷವೂ ತಂತ್ರಜ್ಞಾನ ಬಳಸಿಕೊಂಡು, ಆರೋಪಿಗಳ ಪತ್ತೆಹಚ್ಚಲಾಗುವುದು’ ಎಂದು ಹೇಳಿದರು. 2022ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ನಗರದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳ ವರದಿಯನ್ನು ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದು, ಅಂಕಿಅಂಶ ಇಲ್ಲಿದೆ.

ವ್ಹೀಲಿಂಗ್‌ ವಿರುದ್ಧ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು.

- ಅನುಚೇತ್, ಪೊಲೀಸ್‌ ಆಯುಕ್ತ, <br/>ಸಂಚಾರ ವಿಭಾಗ

ನಗರದಲ್ಲಿ ದಾಖಲಾದ ಪ್ರಕರಣಗಳನ್ನು ವೈಜ್ಞಾನಿಕ ವಿಧಾನಗಳಿಗೆ ಒತ್ತು ನೀಡಿ ತನಿಖೆ ಕೈಗೊಳ್ಳಲಾಗುತ್ತಿದೆ.

-ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.