ADVERTISEMENT

ಬಸವನಗುಡಿಯಲ್ಲಿ ಸಾಂಸ್ಕೃತಿಕ ಸಂಜೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 0:02 IST
Last Updated 20 ಫೆಬ್ರುವರಿ 2026, 0:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಪರಮ್ ಫೌಂಡೇಶನ್' ವತಿಯಿಂದ 'ಪರಮ್ ಕಲ್ಚರ್' ಅಡಿ 'ಪರಮ್ ವಿಹಾರ' ಎಂಬ  ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ. 22ರಂದು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ 'ಅಬಲಾಶ್ರಮ'ದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. 

ADVERTISEMENT

ಉದಯೋನ್ಮುಖ ಕಲಾವಿದರಿಗಾಗಿಯೇ ಮುಡಿಪಾಗಿಟ್ಟಿರುವ ಈ ವೇದಿಕೆಯಲ್ಲಿ ಮೊದಲಿಗೆ ಸುಮಧುರವಾದ 'ಸುಗಮ ಸಂಗೀತ' ಕಾರ್ಯಕ್ರಮ ಮೂಡಿ ಬರಲಿದೆ. ಯುವ ಗಾಯಕ ಸ್ಕಂದೇಶ್ ಎಸ್. ಅವರ ಗಾಯನಕ್ಕೆ ಕೀಬೋರ್ಡ್‌ ವಾದಕ ಜಯವರ್ಧನ ಹಾಗೂ ತಬಲಾ ವಾದಕ ರೋಹಿತ್ ಕುಲಕರ್ಣಿ ಅವರು ಸಾಥ್ ನೀಡಲಿದ್ದಾರೆ.

ಬಳಿಕ ಹೆಜ್ಜೆಗಳ ನಾದದೊಂದಿಗೆ ಕಥಕ್ ನೃತ್ಯ ವೈಭವ ಅನಾವರಣಗೊಳ್ಳಲಿದ್ದು, ನಂತರ ಆಕರ್ಷಕ ಕಥಕ್ ನೃತ್ಯ ಪ್ರದರ್ಶನ ಇದೆ.

'ಪರಮ್ ಫೌಂಡೇಶನ್' ಹಾಗೂ 'ಪ್ರಕೃತಿ' ಸಂಸ್ಥೆಯ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮ ಒಟ್ಟು 2 ತಾಸು ‌‌‌ನಡೆಯಲಿದ್ದು, ಕಲಾಭಿಮಾನಿಗಳಿಗೆ ರಸದೌತಣ ಉಣಬಡಿಸಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.