
ಕೊಂಡದಕುಳಿ ರಾಮಚಂದ್ರ ಹೆಗಡೆ ಹಾಗೂ ತೋಟಿಮನೆ ಗಣಪತಿ ಹೆಗಡೆ
ಬೆಂಗಳೂರು: ದಕ್ಷಿಣೋತ್ತರ ಅತಿಥಿ ಕಲಾವಿದರಿಂದ ಇದೇ 13ರಂದು ರಾತ್ರಿ 10 ಗಂಟೆಯಿಂದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಭಾವ ಸಂಗಮ’ ಶೀರ್ಷಿಕೆಯಡಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವಿನಾಯಕ್ ಭಟ್ಟ ಅವರ ಸಂಯೋಜನೆಯಲ್ಲಿ ಈ ಪ್ರದರ್ಶನಗಳು ನಡೆಯುತ್ತಿವೆ. ದೇವಿದಾಸ್ ವಿರಚಿತ ‘ಭೀಷ್ಮ ಪರ್ವ’ ಹಾಗೂ ಹಟ್ಟಿಯಂಗಡಿ ರಾಮ್ ಭಟ್ ವಿರಚಿತ ‘ಸುಭದ್ರಾ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಕಾಣಲಿದೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ, ತೋಟಿಮನೆ ಗಣಪತಿ ಹೆಗಡೆ, ಥಂಡಿಮನೆ ಶ್ರೀಪಾದ ಭಟ್, ಹಿಲ್ಲೂರು ಮಂಜು, ಪ್ರಶಾಂತ್ ಹೆಗಡೆ, ನಾಗೇಶ್ ಕುಳಿಮನೆ, ಆತ್ರೇಯ ಗಾಂವ್ಕರ್, ವಿನಾಯಕ ಕಲಗದ್ದೆ, ಅಶೋಕ್ ಭಟ್ ಸಿದ್ದಾಪುರ, ಕೆ.ಜಿ. ಮಂಜುನಾಥ್, ಚಪ್ಪರಮನೆ ಶ್ರೀಧರ್ ಹೆಗಡೆ, ಸದಾಶಿವ ಮಲವಳ್ಳಿ ಹಾಗೂ ರಾಮಕೃಷ್ಣ ಭಟ್ ಪಾಲ್ಗೊಳ್ಳಲಿದ್ದಾರೆ.
ಟಿಕೆಟ್ ಹಾಗೂ ವಿವರಕ್ಕೆ: 94493 24972
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಇದೇ 13ರಂದು ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಚಿಂತಕ ಪ್ರೊ.ಕ.ವೆಂ.ರಾಜಗೋಪಾಲ್ ಅವರ ಜನ್ಮಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿದೆ.
ಮಧ್ಯಾಹ್ನ 3.30ರಿಂದ ಈ ಸಮಾರಂಭ ಪ್ರಾರಂಭವಾಗಲಿದೆ. ಸಂಜೆ 7.30ರಿಂದ ‘ಅನುಗ್ರಹ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಕ.ವೆಂ. ರಾಜಗೋಪಾಲ್ ಅವರು ರಚಿಸಿದ ಈ ನಾಟಕವು ಪ್ರಭುರಾಜ್ ಅವರ ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ.
‘ರಾಮ ಶಾಮ ಡ್ರಾಮ’ ನಾಟಕದ ದೃಶ್ಯ
ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಇದೇ 14ರಂದು ಸಂಜೆ 5 ಮತ್ತು 7.30ಕ್ಕೆ ಎನ್.ಆರ್. ಕಾಲೊನಿಯಲ್ಲಿರುವ ಸಿ.ಅಶ್ವಥ್ ಕಲಾ ಭವನದಲ್ಲಿ ‘ರಾಮ ಶಾಮ ಡ್ರಾಮ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
ರಾಜೇಂದ್ರ ಕಾರಂತ ಅವರು ಈ ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ‘ದೇವರೇ ಗತಿ ಆ್ಯಕ್ಸಿಡೆಂಟ್ ಆ್ಯಂಡ್ ಎಮರ್ಜೆನ್ಸಿ ಸೆಂಟರ್’ನಲ್ಲಿ ಕೆಲಸ ಮಾಡುವ ವೈದ್ಯ ರಾಮ್, ಸಹಾಯಕ ಶಾಮ ಮತ್ತು ಸ್ವಾಗತಕಾರ ಭಾಮ ಹಾಗೂ ಚಿತ್ರ ವಿಚಿತ್ರ ಸಮಸ್ಯೆಗಳನ್ನು ಹೊತ್ತು ಆಸ್ಪತ್ರೆಗೆ ಬರುವ ರೋಗಿಗಳ ನಡುವೆ ನಡೆಯುವ ಹಾಸ್ಯ ಸನ್ನಿವೇಶಗಳೇ ನಾಟಕದ ಕಥಾವಸ್ತು. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಸಂಪರ್ಕಕ್ಕೆ: 9945977184 ಅಥವಾ 9916863637
ಬೆಂಗಳೂರು: ಚಿತ್ರನಾಟ್ಯ ಫೌಂಡೇಷನ್ ವತಿಯಿಂದ ಇದೇ 12 ಮತ್ತು 13ರಂದು ಸಂಜೆ 5.30ಕ್ಕೆ ರಾಜಾಜಿನಗರದ ಕನ್ನಡ ಸಹೃದಯರ ಪ್ರತಿಷ್ಠಾನದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ಸಂವಾದ ಹಾಗೂ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
12ರಂದು ‘ಕನ್ನಡ ಸಾಹಿತ್ಯ ಹಾಗೂ ಸಂಗೀತದ ಸಂಬಂಧ’ ವಿಷಯದ ಮೇಲೆ ಸಂವಾದ ನಡೆಯಲಿದೆ. ಈ ಸಂವಾದವನ್ನು ಲೇಖಕಿ ಎಲ್.ಜಿ. ಮೀರಾ ಹಾಗೂ ತಂಡ ನಡೆಸಿಕೊಡಲಿದೆ. 13ರಂದು ಚಿತ್ರನಾಟ್ಯ ಸಂಸ್ಥೆಯ ವಿದ್ಯಾರ್ಥಿನಿಯರಿಂದ ‘ಸಂಬಂಧ–ನಾಟ್ಯಾನಂದ’ ಶೀರ್ಷಿಕೆಯಡಿ ಭರತನಾಟ್ಯ–ಭಾವನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.