ADVERTISEMENT

ಬೆಂಗಳೂರು | ರೂಪಾಯಿಗೊಂದು ಮೊಟ್ಟೆ: ₹ 48 ಸಾವಿರ ಕಳೆದುಕೊಂಡ ಮಹಿಳೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 0:25 IST
Last Updated 26 ಫೆಬ್ರುವರಿ 2024, 0:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘₹48 ಪಾವತಿಸಿ 48 ಮೊಟ್ಟೆ ಖರೀದಿಸಿ’ ಎಂಬುದಾಗಿ ಇ–ಮೇಲ್ ಮೂಲಕ ಬಂದಿದ್ದ ಸಂದೇಶ ನಂಬಿ ಮಹಿಳೆಯೊಬ್ಬರು ₹ 48 ಸಾವಿರ ಕಳೆದುಕೊಂಡಿದ್ದು, ಈ ಸಂಬಂಧ ಹೈಗ್ರೌಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಸಂತನಗರದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಮಹಿಳೆಯ ಇ–ಮೇಲ್‌ಗೆ ಫೆ.17ರಂದು ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್‌ ಕ್ಲಿಕ್ ಮಾಡಿದ್ದ ಮಹಿಳೆ, ವಿಳಾಸ ಹಾಗೂ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಿದ್ದರು. ನಂತರ, ಆನ್‌ಲೈನ್ ಮೂಲಕ ₹ 48 ಪಾವತಿಸಿದ್ದರು. ಇದಾದ ಕೆಲ ನಿಮಿಷಗಳಲ್ಲಿ ಮಹಿಳೆಯ ಖಾತೆಯಿಂದ ₹ 48 ಸಾವಿರ ಕಡಿತವಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಇ– ಕಾಮರ್ಸ್ ಜಾಲತಾಣವೊಂದರ ಹೆಸರಿನಲ್ಲಿ ಸಂದೇಶ ಕಳುಹಿಸಿ ಹಣ ದೋಚಲಾಗಿದೆ. ಆಮಿಷವೊಡ್ಡಿ ಹಣ ದೋಚುವ ಜಾಲದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.