ADVERTISEMENT

ಸೈಬರ್ ಕ್ರೈಂ ಠಾಣೆ ಸಮಸ್ಯೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 2:24 IST
Last Updated 12 ಡಿಸೆಂಬರ್ 2019, 2:24 IST
   

ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದ ಸ್ಥಗಿತವಾಗಿದ್ದ ಪೊಲೀಸ್‌ ಕಮಿಷನರ್ ಕಚೇರಿ ಆವರಣದಲ್ಲಿದ್ದ ಸೈಬರ್ ಕ್ರೈಂ ಪೊಲೀಸ್ ಠಾಣೆ ಮಂಗಳವಾರ (ಡಿ.10) ಮತ್ತೆ ಆರಂಭವಾಗಿದೆ.

9,999ಕ್ಕೆ ಸೀಮಿತವಾಗಿದ್ದ ದೂರುಗಳ ಸಂಖ್ಯೆಯನ್ನು ಇದೀಗ 10 ಸಾವಿರಕ್ಕೆ ಹೆಚ್ಚಿಸುವ ಮೂಲಕ ಸಮಸ್ಯೆ ಪರಿಹರಿಸಲಾಗಿದೆ. 2019ರ ಜನವರಿಯಿಂದ ನ. 25ರವರೆಗೆ 9999 ದೂರು ದಾಖಲಾಗಿದ್ದವು. 10 ಸಾವಿರ ದೂರು ದಾಖಲಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು.

ಈ ಹಿಂದೆ ಕಮಿಷನರೇಟ್ ವ್ಯಾಪ್ತಿಯಲ್ಲಿನ ಸೈಬರ್ ವಂಚನೆ ಪ್ರಕರಣಗಳನ್ನು ಪೊಲೀಸ್ ಕಮಿಷನರ್‌ ಕಚೇರಿಯಲ್ಲಿಯೇ ದಾಖಲಿಸಬೇಕಿತ್ತು. ಇದರಿಂದಾಗಿ ನಗರದ ಏಕೈಕ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇವಲ 11 ತಿಂಗಳಲ್ಲಿ 9,999 ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಈ ಹಿನ್ನೆಲೆಯಲ್ಲಿ ಡಿಜಿಪಿ ನೀಲಮಣಿ ಎನ್. ರಾಜು ಅವರು ಸೈಬರ್ ವಂಚನೆ ಪ್ರಕರಣಗಳನ್ನು ಸ್ಥಳೀಯ ಠಾಣೆಗಳಲ್ಲಿ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.