ಪ್ರಾತಿನಿಧಿಕ ಚಿತ್ರ
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ ಹತ್ತನೇ ವರ್ಷದ ಗಣೇಶೋತ್ಸವದಲ್ಲಿ 18 ಅಡಿ ಎತ್ತರದ ಗಣೇಶ ಮೂರ್ತಿಯ ಪ್ರಸಾದವಾದ 15 ಕೆ.ಜಿ. ಲಡ್ಡು ಜೊತೆಗೆ ಕಾಲು ಕೆ.ಜಿ. ಬೆಳ್ಳಿ ಗಣೇಶ ವಿಗ್ರಹವನ್ನು ಉದ್ಯಮಿ ಶ್ರೀಕಾಂತ್ ಅವರು ಹರಾಜಿನಲ್ಲಿ 5.50 ಲಕ್ಷಕ್ಕೆ ಖರೀದಿಸಿದರು.
ಮೆರವಣಿಯಲ್ಲಿ 51 ಗಣೇಶ ಮೂರ್ತಿಗಳು ಇದ್ದವು. ಕಲಾತಂಡಗಳಾದ ನಾಸಿಕ್ ಡೋಲ್, ಚೆಂಡೆ ವಾದ್ಯ, ಬ್ಯಾಂಡ್, ಡೊಳ್ಳು ಕುಣಿತ, ಗೊಂಬೆ ಕುಣಿತ ಹಾಗೂ ಕೇರಳದಿಂದ ಬಂದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಭಕ್ತರು ಕುಣಿದು ಸಂಭ್ರಮಿಸಿದರು.
ಎಂಇಐ ಆಟದ ಮೈದಾನದಿಂದ ಮೆರವಣಿಗೆ ಪ್ರಾರಂಭವಾಗಿ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್ ಲೈನ್, ಸೆಲೆಕ್ಷನ್ ಕಾರ್ನರ್ ಮೂಲಕ ಸಾಗಿ ದಾಸರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಚೊಕ್ಕಸಂದ್ರದ ಕೆರೆ ಹತ್ತಿರ ವಿಸರ್ಜಿಸಲಾಯಿತು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕ ಎಸ್. ಮುನಿರಾಜು, ಉದ್ಯಮಿ ಶ್ರೀಕಾಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.