ADVERTISEMENT

ಅಲೆಮಾರಿಗಳಿಗೆ ಆದ್ಯತೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 15:56 IST
Last Updated 13 ಫೆಬ್ರುವರಿ 2026, 15:56 IST
<div class="paragraphs"><p> ಅಲೆಮಾರಿಗಳು ಬಿಡು </p></div>

ಅಲೆಮಾರಿಗಳು ಬಿಡು

   

ಬೆಂಗಳೂರು: ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳಾಗಿರುವ ಅಲೆಮಾರಿಗಳಿಗೆ 2026–27ನೇ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಅಲೆಮಾರಿಗಳಿಗೆ ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಅಲೆಮಾರಿ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಮನವಿ ಮಾಡಿದರು.

ಈ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಮಾಡಿ ಅನುದಾನ ಮೀಸಲಿರಿಸಬೇಕು. ಉಚಿತವಾಗಿ ನಿವೇಶನ, ವಸತಿ, ವಸತಿಶಾಲೆ ಒದಗಿಸಬೇಕು. ಅಲೆಮಾರಿಗಳಿಗೆ ಪ್ರತ್ಯೇಕ ಆಯೋಗ ಮಾಡಬೇಕು. ಸಂಶೋಧನಾ ಕೇಂದ್ರ, ಅಧ್ಯಯನ ಸಂಸ್ಥೆ, ಅಲೆಮಾರಿ ಆಕಾಡೆಮಿ ಸ್ಥಾಪನೆಗೆ ಒತ್ತು ನೀಡಬೇಕು. ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಅಲೆಮಾರಿ ಅಭಿವೃದ್ಧಿ ನಿಗಮದ ಹಾಲಿ ಅಧ್ಯಕ್ಷರ ಅವಧಿ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ. ಆ ಸ್ಥಾನಕ್ಕೆ ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಕ್ಕೆ ಸೇರಿರುವವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಂಜುನಾಥ್‌ ದಯಾತ್ಕರ್‌ ಅಲೆಮಾರಿ, ಬಸವರಾಜ್‌ ನಾರಾಯಣ್ಕರ್‌, ಹನುಮಂತ, ಕೃಷ್ಣಪ್ಪ, ಶಾಂತರಾಜ್‌, ದುರ್ಗೇಶಿ ವಿಭೂತಿ, ಆಂಜನೇಯ, ವೆಂಕಟೇಶ್‌, ರಂಗನಾಥ್‌, ರಾಮಯ್ಯ, ಚಿನ್ನ, ಶೇಷಪ್ಪ, ಸಾವಿತ್ರಿ ರತ್ನಾಕರ, ಶಾರದಾ, ಮಂಜುಳಾ ಸಹಿತ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.