ADVERTISEMENT

ದಂತ ಸಮಸ್ಯೆ: ಸ್ಥಳದಲ್ಲೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 19:31 IST
Last Updated 3 ಜುಲೈ 2022, 19:31 IST
   

ಬೆಂಗಳೂರು:ಗಾಯತ್ರಿನಗರ ವಾರ್ಡ್‌ನಲ್ಲಿ ಭಾನುವಾರ ನಡೆದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಹಲ್ಲಿನ ಸಮಸ್ಯೆ ಎದುರಿಸುತ್ತಿದ್ದ 150ಕ್ಕೂ ಅಧಿಕ ಮಂದಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು.

ಬಿಬಿಎಂಪಿ ನಿಕಟಪೂರ್ವ ಸದಸ್ಯೆಚಂದ್ರಕಲಾ ಗಿರೀಶ್ ಲಕ್ಕಣ್ಣ ಮತ್ತು ವಿಜಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿಬಿರ ನಡೆಯಿತು.

‘ವ್ಯಕ್ತಿಗೆ ಆರೋಗ್ಯದಷ್ಟೇ ದಂತಗಳ ಆರೋಗ್ಯವೂ ಮುಖ್ಯ. ದಂತ ಸರಿಯಿದ್ದರೆ ಯಾವುದೇ ಕಾಯಿಲೆ ಸುಲಭವಾಗಿ ಬರುವುದಿಲ್ಲ’ ಎಂದುಚಂದ್ರಕಲಾ ಗಿರೀಶ್ ಅಭಿಪ್ರಾಯಪಟ್ಟರು.

ADVERTISEMENT

ವಿಜಯ ಜಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಲತಾ ಹಾಗೂ ಡಾ.ನಕುಲ್ ನೇತೃತ್ವದ ವೈದ್ಯರ ತಂಡ ಸಾವಿರಕ್ಕೂ ಅಧಿಕ ಮಂದಿಗೆ ತಪಾಸಣೆ ನಡೆಸಿತು. ದಂತ ಸಮಸ್ಯೆ ಇದ್ದವರಲ್ಲಿ 150 ಮಂದಿಗೆ ಚಿಕಿತ್ಸೆ ನೀಡಲಾಯಿತು.ವಿವಿಧ ಕಾರಣಗಳಿಂದ ಹಲ್ಲಿನ ತೊಂದರೆ, ನೋವು ಅನುಭವಿಸುತ್ತಿದ್ದ 50ಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲಿಯೇ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.