ADVERTISEMENT

DH Bengaluru 2040 Summit|ವಿಮಾನ ನಿಲ್ದಾಣ ಬಳಿ ಕಲೆ ಮತ್ತು ಸಂಸ್ಕೃತಿಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 11:23 IST
Last Updated 20 ಫೆಬ್ರುವರಿ 2026, 11:23 IST
   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಏರೋಡ್ರಮ್‌ನಲ್ಲಿ ಸಂಗೀತ ಸಂಬಂಧಿತ ಚಟುವಟಿಕೆಗೆ ಹೊಸ ಮನರಂಜನಾ ಕೇಂದ್ರ ನಿರ್ಮಾಣವಾಗುತ್ತಿದ್ದು, ಕಲೆ ಮತ್ತು ಸಂಸ್ಕೃತಿಗೆ ರಾಜ್ಯ ಸರ್ಕಾರದ ಬೆಂಬಲವನ್ನು ಸೂಚಿಸುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ನಡೆಸುತ್ತಿರುವ ಬೆಂಗಳೂರು 2040 ಶೃಂಗಸಭೆಯಲ್ಲಿ ಫೇಸ್ ಇನ್ ಈವೆಂಟ್ ಅಂಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಓಂ ಪ್ರದತ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಪ್ರವಾಸೋದ್ಯಮ ಇಲಾಖೆಯು ಏರೋಡ್ರಮ್‌ನಲ್ಲಿ ಈ ಸಂಬಂಧಿತ ನಿರ್ಮಾಣ ಮತ್ತು ಅಭಿವೃದ್ಧಿಗೆ ಸರ್ಕಾರ ಸಬ್ಸಿಡಿಗಳನ್ನು ನೀಡಲಿದೆ ಎಂದು ಘೋಷಿಸಿತ್ತು.

ಎಂಬೆಸಿ ಗ್ರೂಪ್, ಫೇಸ್ 1 ಈವೆಂಟ್ ಮತ್ತು ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಮನರಂಜನಾ ಕಂಪನಿಗಳಲ್ಲಿ ಒಂದಾದ ಲೈವ್ ನೇಷನ್ ನಡುವಿನ ಪಾಲುದಾರಿಕೆಯಲ್ಲಿ ನಡೆಯುತ್ತಿರುವ ಈ ನಿರ್ಮಾಣವು 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ADVERTISEMENT

ಇದು ಪ್ರಪಂಚದಾದ್ಯಂತದ ಪ್ರಮುಖ ಕಲಾವಿದರ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿದೆ ಎಂದು ಅವರು ತಿಳಿಸಿದರು.

ಶಿವಾಜಿನಗರ ಶಾಸಕ ಅರ್ಷದ್ ರಿಜ್ವಾನ್ ಮತ್ತು ಸಂಗೀತಗಾರ ಬ್ರೂಸ್ ಲೀ ಮಣಿ ಅವರನ್ನೊಳಗೊಂಡ ಪ್ಯಾನಲ್ ಚರ್ಚೆ ವೇಳೆ ಪ್ರದತ್ ಸಹ ಇದ್ದರು. ಬೆಂಗಳೂರಲ್ಲಿ ಸಂಗೀತದ ಕಛೇರಿಗಳ ಗತವೈಭವವನ್ನು ಮರಳಿಸಲು ಏನು ಮಾಡಬಹುದು ಎಂಬ ವಿಷಯದ ಕುರಿತು ಚರ್ಚಿಸಿದರು.

'ಸರ್ಕಾರವು ಸಗೀತ ಮೂಲಸೌಕರ್ಯ ಅಗತ್ಯತೆಗಳು ಮತ್ತು ನಾಗರಿಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವತ್ತ ಸರ್ಕಾರ ಹೆಜ್ಜೆ ಇಡುತ್ತಿದೆ ಎಂದು ನಾನು ಭಾವಿಸುತ್ತೇನೆ’ಎಂದು ಅವರು ಹೇಳಿದರು.

ಚರ್ಚ್ ಸ್ಟ್ರೀಟ್‌ನಲ್ಲಿ ಎಡ್ ಶೀರನ್ ಅವರ ಪ್ರದರ್ಶನಕ್ಕೆ ಸಂಬಂಧಿಸಿದ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿ, ಪ್ರತ್ಯಕ್ಷ ಸಂಗೀತ ಕಾರ್ಯಕ್ರಮ ಮತ್ತು ಕಲಾವಿದರ ಬಗ್ಗೆ ಪೊಲೀಸರು ಮತ್ತು ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸುವ ಮಹತ್ವವನ್ನು ಪ್ರದತ್ ಒತ್ತಿ ಹೇಳಿದರು.

‘ಧಾರ್ಮಿಕ ಮುಖಂಡರು ಅಥವಾ ಕಾರ್ಯಕ್ರಮಗಳಿಗೆ ಅವರಿಂದ ಅದೇ ರೀತಿಯ ಪ್ರತಿರೋಧವನ್ನು ನಾವು ಕಾಣುವುದಿಲ್ಲ’ಎಂದು ಅವರು ವಿವರಿಸಿದರು.

ಸಂಗೀತಗಾರರಿಗೆ ಸರ್ಕಾರದಿಂದ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದು ಮಣಿ ಗಮನಸೆಳೆದರು.

‘ಸಂಗೀತಗಾರರು ತಮ್ಮ ಕಲೆಯನ್ನು ಅನುಸರಿಸಲು ಸುಲಭವಾಗುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಸಹಕರಿಸಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಗಿಟಾರ್ ವಾದಕ ಹೇಳಿದರು.

ಕಳೆದ 10 ವರ್ಷಗಳಲ್ಲಿ ನಗರದಲ್ಲಿ ಕಲಾವಿದರ ಸಂಖ್ಯೆಯು ಗಣನೀಯವಾಗಿ ಬೆಳೆದಿದ್ದರೂ, ಅವರು ಸುಸ್ಥಿರ ದೀರ್ಘಕಾಲೀನ ವೃತ್ತಿಜೀವನವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಅರ್ಥವಲ್ಲ ಎಂದು ಮಣಿ ಹೇಳಿದರು.

ಸಂಗೀತಗಾರರು ಬಹು ಆದಾಯದ ಮೂಲಗಳನ್ನು ಹೊಂದಿರಬೇಕು ಎಂದರು.

‘ನನ್ನ ಪ್ರಕಾರ ಯಶಸ್ಸಿಗೆ ಯಾವುದೇ ಮಾರ್ಗಸೂಚಿ ಇಲ್ಲ. ನಾನು ಬ್ಯಾಂಡ್‌ನಲ್ಲಿ ನುಡಿಸುತ್ತೇನೆ ಮತ್ತು ಸಂಗೀತವನ್ನು ಕಲಿಸುತ್ತೇನೆ. ಈವನ ನಡೆಸಲು ಆದಾಯಕ್ಕಾಗಿ ಈವೆಂಟ್ ಕಂಪನಿಗಳಲ್ಲಿ ಕೆಲಸ ಮಾಡುವ ಸಂಗೀತಗಾರರನ್ನು ನಾನು ಬಲ್ಲೆ’ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.