ADVERTISEMENT

ಇ.ವಿ ವಾಹನಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 16:15 IST
Last Updated 13 ಫೆಬ್ರುವರಿ 2025, 16:15 IST
<div class="paragraphs"><p> ಇ.ವಿ. ವಾಹನಗಳು.</p></div>

ಇ.ವಿ. ವಾಹನಗಳು.

   

ಬೆಂಗಳೂರು: ನಗರದ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌ ವತಿಯಿಂದ ಶಬ್ದ ಮತ್ತು ವಾಯುಮಾಲಿನ್ಯ ಗಣನೀಯವಾಗಿ ಕಡಿಮೆ ಮಾಡುವಂತಹ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ (ಇವಿ) ಪ್ರದರ್ಶನ ಮತ್ತು ಸಾಲ ಮೇಳವನ್ನು ಫೆಬ್ರುವರಿ 16ರಂದು ಶಂಕರ್‌ ನಾಗ್‌ ಸರ್ಕಲ್‌ನಲ್ಲಿರುವ ಬಿಬಿಎಂಪಿ ಆಟದ ಮೈದಾನ (ಡೊಂಕೊಳ)ದಲ್ಲಿ ಆಯೋಜಿಸಲಾಗಿದೆ.

‘ನಿರುದ್ಯೋಗಿ ಯುವಕರು, ಸ್ವಉದ್ಯೋಗ ಮಾಡಲಿಚ್ಛಿಸುವ ಮಹಿಳೆಯರಿಗೆ ಸದುಪಯೋಗವಾಗಲೆಂದು ವಾಹನಗಳ ಪ್ರದರ್ಶನ ಹಾಗೂ ಸಾಲ ಮೇಳ ಆಯೋಜಿಸಿದ್ದು, ಎಲ್ಲಾ ವಾಹನಗಳಿಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು’ ಎಂದು  ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌  ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಂಸದ ತೇಜಸ್ವಿಸೂರ್ಯ, ಶಾಸಕ ರವಿಸುಬ್ರಮಣ್ಯ ಭಾಗವಹಿಸಲಿದ್ದಾರೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.