ADVERTISEMENT

ಜಿಲ್ಲಾ ಕೋರ್ಟ್: ಖುದ್ದು ಅರ್ಜಿ ದಾಖಲಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಮೇ 2020, 20:52 IST
Last Updated 18 ಮೇ 2020, 20:52 IST

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ ರಾಜ್ಯದ 16 ಜಿಲ್ಲಾ ನ್ಯಾಯಾಲಯಗಳಲ್ಲಿ ಹೊಸ ಅರ್ಜಿಗಳ ಖುದ್ದು ದಾಖಲಾತಿಗೆ ಹೈಕೋರ್ಟ್ ಅನುಮತಿ ನೀಡಿದೆ.

ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಧಿಸೂಚನೆ ಹೊರಡಿಸಿದ್ದು ಹಲವು ನಿಬಂಧನೆಗಳ ಅನುಸಾರ ಅರ್ಜಿ ದಾಖಲಿಸಲು ಅವಕಾಶ ಕಲ್ಪಿಸಿದ್ದಾರೆ.

ಬೆಂಗಳೂರು ನಗರ, ಗ್ರಾಮಾಂತರ, ಬೀದರ್, ಚಿಕ್ಕಮಗಳೂರು, ಧಾರವಾಡ, ದಕ್ಷಿಣ ಕನ್ನಡ, ಕೋಲಾರ, ಕೊಡಗು-
ಮಡಿಕೇರಿ, ಗದಗ, ಹಾವೇರಿ, ಮಂಡ್ಯ, ಮೈಸೂರು, ತುಮಕೂರು, ಉಡುಪಿ ಮತ್ತು ಯಾದಗಿರಿ ಜಿಲ್ಲಾ ನ್ಯಾಯಾಲಯಗಳಲ್ಲಿ ಮೇ 20, 21 ಮತ್ತು 22ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವಕೀಲರು, ಅವರ ಕ್ಲರ್ಕ್ ಗಳು ಮತ್ತು ಸ್ವತಃ ವಾದ ಮಂಡಿಸುವ ಅರ್ಜಿದಾರರು ಖುದ್ದಾಗಿ ಅರ್ಜಿ, ಕೇವಿಯಟ್, ವಕಾಲತ್ತು ಹಾಗೂ ಮಧ್ಯಂತರ ಅರ್ಜಿಗಳನ್ನು ದಾಖಲಿಸಬಹುದಾಗಿದೆ.

ADVERTISEMENT

ಲಾಕ್‌ಡೌನ್ ಘೋಷಣೆಯಾದ ಮಾರ್ಚ್ 24ರಿಂದ ವಕೀಲರು ಖುದ್ದು ಕೋರ್ಟ್‌ಗೆ ತೆರಳಿ ಅರ್ಜಿ ದಾಖಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.