ADVERTISEMENT

ರಾತ್ರಿ ವೇಳೆ ಸಿಂಗಲ್ ಫೇಸ್ ಕೃಷಿ ಪಂಪ್‌ಸೆಟ್‌ ಬಳಸಬೇಡಿ: ರೈತರಿಗೆ ಬೆಸ್ಕಾಂ ಮನವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 16:22 IST
Last Updated 16 ಫೆಬ್ರುವರಿ 2025, 16:22 IST
<div class="paragraphs"><p>ಬೆಸ್ಕಾಂ</p></div>

ಬೆಸ್ಕಾಂ

   

ಬೆಂಗಳೂರು: ನಿತ್ಯ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ, ನೀರಾವರಿ ಫೀಡರ್‌ಗಳ ಮೂಲಕ ತೋಟದ ಮನೆಗಳ ಗೃಹ ಬಳಕೆಗೆ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳಿಗಾಗಿ ಸಿಂಗಲ್‌ ಫೇಸ್‌ ವಿದ್ಯುತ್‌ ಅನ್ನು ಓಪನ್‌ ಡೆಲ್ಟಾ ಮೂಲಕ ನೀಡಲಾಗುತ್ತಿದೆ. ಈ ಸಮಯದಲ್ಲಿ ಸಿಂಗಲ್‌ ಫೇಸ್‌ ಕೃಷಿ ಪಂಪ್‌ಸೆಟ್‌ಗಳನ್ನು ಬಳಸಬಾರದು ಎಂದು ಬೆಸ್ಕಾಂ ರೈತರಿಗೆ ಮನವಿ ಮಾಡಿದೆ.

ಹೀಗೆ ಸಿಂಗಲ್‌ ಫೇಸ್‌ ವಿದ್ಯುತ್ ಪೂರೈಸುವಾಗ, ಕೆಲವರು ಕೃಷಿ ಪಂಪ್‌ಸೆಟ್‌ಗಳನ್ನು ನೀರಾವರಿ ಫೀಡರ್‌ ಮೂಲಕ ಬಳಸುತ್ತಿದ್ದು, ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದ್ದರಿಂದ ಈ ಸಮಯದಲ್ಲಿ ಸಿಂಗಲ್ ಫೇಸ್ ಕೃಷಿ ಪಂಪ್‌ಸೆಟ್‌ ಬಳಸದಂತೆ ಮನವಿ ಮಾಡಲಾಗಿದೆ.

ADVERTISEMENT

ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ 4 ಗಂಟೆ ಹಾಗೂ ರಾತ್ರಿ ವೇಳೆ 3 ಗಂಟೆ ‘ತ್ರಿ ಫೇಸ್’ ವಿದ್ಯುತ್ ಪೂರೈಸಲಾಗುತ್ತಿದೆ. ಹಳ್ಳಿಗಳಲ್ಲಿ ಮನೆಗಳಿಗೆ ನಿರಂತರ ಜ್ಯೋತಿ ಮೂಲಕ ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ ನೀರಾವರಿ ಫೀಡರ್‌ಗಳ ಮೂಲಕ ಸಿಂಗಲ್‌ ಫೇಸ್ ವಿದ್ಯುತ್‌ ಅನ್ನು ಓಪನ್ ಡೆಲ್ಟಾ ಮೂಲಕ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.