ADVERTISEMENT

ಡಿ.ಆರ್‌ ನಾಗರಾಜ್ ಪ್ರತಿಷ್ಠಾನಕ್ಕೆ ಆಗ್ರಹ: ಸಿ.ಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:32 IST
Last Updated 12 ಫೆಬ್ರುವರಿ 2026, 23:32 IST
<div class="paragraphs"><p>ಮೋಹನ್‌ ಕೊಂಡಜ್ಜಿ</p></div>

ಮೋಹನ್‌ ಕೊಂಡಜ್ಜಿ

   

ಬೆಂಗಳೂರು: ಸಾಂಸ್ಕೃತಿಕ ಚಿಂತಕ ಡಿ.ಆರ್.ನಾಗರಾಜ್‌ ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸಬೇಕು ಎಂದು ಕೋರಿ ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ್‌ ಕೊಂಡಜ್ಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಪ್ರತಿಷ್ಠಾನ ಸ್ಥಾಪನೆಗೆ ರಾಜ್ಯದ ಚಿಂತಕರು, ಸಾಹಿತಿಗಳು, ಹೋರಾಟಗಾರರು ಸಹಿ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂತಹ ಮಹತ್ವದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಚಿಂತಕರಾದ ಡಿ.ಆರ್.ಎನ್‌ ಪ್ರತಿಷ್ಠಾನ ಮಾಡಬೇಕಾದದ್ದು ಅತ್ಯಂತ ಅರ್ಥಪೂರ್ಣವಾದ ಕೆಲಸ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.