ADVERTISEMENT

ನಾಟಕ ಬೆಂಗಳೂರು ರಂಗ ಸಂಭ್ರಮ; ಕಲಾಕ್ಷೇತ್ರದಲ್ಲಿ ಡಿ.6ರಿಂದ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 14:17 IST
Last Updated 4 ಡಿಸೆಂಬರ್ 2023, 14:17 IST
<div class="paragraphs"><p> ರವೀಂದ್ರ ಕಲಾಕ್ಷೇತ್ರ</p></div>

ರವೀಂದ್ರ ಕಲಾಕ್ಷೇತ್ರ

   

ಬೆಂಗಳೂರು: ನಾಟಕ ಬೆಂಗಳೂರು ಸಂಚಲನಾ ಸಮಿತಿಯು 16ನೇ ವರ್ಷದ ರಂಗ ಸಂಭ್ರಮದ ಪ್ರಯುಕ್ತ ವಿವಿಧ ನಾಟಕಗಳ ಪ್ರದರ್ಶನವನ್ನು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ. 

ಕರ್ನಾಟಕ ನಾಮಕರಣ ಸುವರ್ಣ ವರ್ಷ ಹಾಗೂ ರವೀಂದ್ರ ಕಲಾಕ್ಷೇತ್ರದ ವಜ್ರ ಮಹೋತ್ಸವದ ಪ್ರಯುಕ್ತವೂ ಈ ರಂಗ ಸಂಭ್ರಮವನ್ನು ಆಯೋಜಿಸಲಾಗಿದೆ. ಡಿ.6ರಂದು ರಂಗಚಿರಂತನ ತಂಡದಿಂದ ‘ಅಲೆಮಾರಿ ಭಾರತ’, ಡಿ.7ರಂದು ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್‌ನಿಂದ ‘ಕತ್ತಲೆ ದಾರಿ ದೂರ’, ಡಿ.11ರಂದು ನಾಟ್ಯದರ್ಪಣ ತಂಡದಿಂದ ‘ನಿನಗೆ ನೀನೇ ಗೆಳತಿ’, ಡಿ.12ರಂದು ಜಂಗಮ ಕಲೆಕ್ಟಿವ್‌ನಿಂದ ‘ಪಂಚಮ ಪದ’, ಡಿ.13ರಂದು ಐಶ್ವರ್ಯ ಕಲಾನಿಕೇತನ ತಂಡದಿಂದ ‘ತಾರಕ್ಕ ಬಿಂದಿಗೆ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 

ADVERTISEMENT

ಡಿ.14ರಂದು ರಂಗಸಂಪದ ತಂಡದಿಂದ ‘ಲೋಕದ ಒಳಹೊರಗೆ’, ಡಿ.15ರಂದು ಸಮಾಜಮುಖಿ ತಂಡದಿಂದ ‘ಚಾವುಂಡರಾಯ’, ಡಿ.16ರಂದು ಅಭಿನಯ ತರಂಗ ತಂಡದಿಂದ ‘ಶಿವರುದ್ರಪ್ಪನ ಆಕಸ್ಮಿಕ ಸಾವು’, ಡಿ.18ರಂದು ಥೇಮ ತಂಡದಿಂದ ‘ಆ ಇ ಫ್ಯಾಮಿಲಿ’, ಡಿ.19ರಂದು ಅನೇಕ ತಂಡದಿಂದ ‘ಹನ್ನೆರಡು ಮೈನಸ್ ಒಂದು’, ಡಿ.20ರಂದು ಸಂಚಾರಿ ಥಿಯೇಟರ್‌ನಿಂದ ‘ಹುತ್ತವ ಬಡಿದರೆ’, ಡಿ.21ರಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದಿಂದ ‘ಗೋಕುಲ ನಿರ್ಗಮನ’ ಹಾಗೂ ಡಿ.22ರಂದು ಸಾಫಲ್ಯ ತಂಡದಿಂದ ‘ಅಡಿಗೆಭಟ್ಟ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಎಲ್ಲ ದಿನವೂ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.