ADVERTISEMENT

ರಾಜಸ್ಥಾನದಿಂದ ಅಫೀಮು ತಂದು ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 15:48 IST
Last Updated 8 ಡಿಸೆಂಬರ್ 2023, 15:48 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ರಾಜಸ್ಥಾನದಿಂದ ಅಫೀಮು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘37 ವರ್ಷದ ಆರೋಪಿ ಹಲವು ತಿಂಗಳಿನಿಂದ ಅಫೀಮು ಮಾರುತ್ತಿದ್ದ. ಈತನನ್ನು ಬಂಧಿಸಿ, ₹2.80 ಲಕ್ಷ ಮೌಲ್ಯದ 1,850 ಗ್ರಾಂ ಅಫೀಮು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಿಷನ್ ರಸ್ತೆಯ ಸಿ.ಕೆ.ಸಿ ಉದ್ಯಾನ ಬಳಿ ಆರೋಪಿ ಓಡಾಡುತ್ತಿದ್ದ. ಪರಿಚಯಸ್ಥ ಗ್ರಾಹಕರಿಗೆ ಅಫೀಮು ಪೊಟ್ಟಣಗಳನ್ನು ನೀಡುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಯಿತು. ಆತನ ಬಳಿಯ ಚೀಲದಲ್ಲಿ ಅಫೀಮು ಪೊಟ್ಟಣ ಹಾಗೂ ತೂಕದ ಯಂತ್ರವಿತ್ತು’ ಎಂದು ತಿಳಿಸಿದರು.

‘ಆರೋಪಿ ಜೊತೆ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದೆ. ಹೀಗಾಗಿ, ಆರೋಪಿ ಹೆಸರು ಗೌಪ್ಯವಾಗಿರಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.