ADVERTISEMENT

ಇ-ತ್ಯಾಜ್ಯ: ಹೊಸ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2018, 18:59 IST
Last Updated 12 ಸೆಪ್ಟೆಂಬರ್ 2018, 18:59 IST
ಕಾರ್ಖಾನೆ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಳ್ಳುತ್ತಿರುವ ಡಾ. ವಿ.ಎಸ್.ಸಾರಸ್ವತ್
ಕಾರ್ಖಾನೆ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಳ್ಳುತ್ತಿರುವ ಡಾ. ವಿ.ಎಸ್.ಸಾರಸ್ವತ್   

ದಾಬಸ್‌ಪೇಟೆ: ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ಬೇರ್ಪಡಿಸುವ ನಗರ ಗಣಿಗಾರಿಕಾ ಸಂಶೋಧನಾ ಕೇಂದ್ರವನ್ನು ದಾಬಸ್‌ಪೇಟೆಯ ಕೈಗಾರಿಕಾ ವಲಯದಲ್ಲಿರುವ ಇ-ಪರಿಸರ ಕಾರ್ಖಾನೆಯ ಆವರಣದಲ್ಲಿ ನವದೆಹಲಿಯ ನೀತಿ ಆಯೋಗದ ಸದಸ್ಯ ಡಾ. ವಿ.ಎಸ್.ಸಾರಸ್ವತ್ ಉದ್ಘಾಟಿಸಿದರು.

‘ಅಸಂಘಟಿತ ತ್ಯಾಜ್ಯ ವಿಲೇವಾರಿ ಘಟಕಗಳು ಪರಿಸರಕ್ಕೆ ಮಾರಕವಾಗುವ ರೀತಿಯಲ್ಲಿ ತ್ಯಾಜ್ಯವನ್ನು ಬೇರ್ಪಡಿಸುತ್ತಿವೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿ, ನೈಸರ್ಗಿಕ ಸಂಪನ್ಮೂಲವನ್ನು ಹಾಳು ಮಾಡುತ್ತಿವೆ. ಇದನ್ನು ಮನಗಂಡು ಇ-ಪರಿಸರ ಕಾರ್ಖಾನೆಯು ನಗರ ಗಣಿಗಾರಿಕಾ ಸಂಶೋಧನಾ ಕೇಂದ್ರವನ್ನು ಆರಂಭಿಸಿ ಹೊಸ ಹೆಜ್ಜೆಯಿಟ್ಟಿರುವುದು ಶ್ಲಾಘನೀಯ. ದೇಶದಲ್ಲಿಯೇ ಇಂತಹ ಸಾಧನೆ ಮಾಡಿದ ಪ್ರಥಮ ಕಾರ್ಖಾನೆಯಾಗಿದೆ ಎಂದು ಸಾರಸ್ವತ್ ಪ್ರಶಂಸಿಸಿದರು.

‘ನಗರ ಇ-ತ್ಯಾಜ್ಯವನ್ನು ವೈಜ್ಞಾನಿಕ ಮಾದರಿಯಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಬೇರ್ಪಡಿಸುವುದಕ್ಕೆ ಇಲ್ಲಿನ ಯುವ ವಿಜ್ಞಾನಿಗಳು ಮುಂದಾಗಿರುವುದು ಸಂತೋಷದ ವಿಚಾರ. ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಪ್ರಕ್ರಿಯೆಗೆ ಇದು ಮುನ್ನುಡಿ’ ಎಂದರು.
ಕಾರ್ಖಾನೆಯ ಆಡಳಿತ ನಿರ್ದೇಶಕ ಡಾ. ಪಿ.ಪಾರ್ಥಸಾರಥಿ, ಹೈದರಾಬಾದಿನ ಸಿ.ಎಂ.ಇ.ಟಿ ನಿರ್ದೇಶಕ ಡಾ. ರಮೇಶ್ ಮತ್ತು ವಿಜ್ಞಾನಿ ಡಾ. ಎಂ.ಆರ್‌.ಪಿ.ರೆಡ್ಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.