ADVERTISEMENT

ಅಂಗವಿಕಲರ ಅಭಿವೃದ್ಧಿ ನಿಗಮ: ₹75 ಲಕ್ಷದ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 18:29 IST
Last Updated 11 ಸೆಪ್ಟೆಂಬರ್ 2025, 18:29 IST
ಇ.ಡಿ
ಇ.ಡಿ   

ಬೆಂಗಳೂರು: ಕರ್ನಾಟಕ ಅಂಗವಿಕಲರ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ₹75 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ನಿಗಮವು ಎಸ್‌ಬಿಐ ಹೆಸರಘಟ್ಟ ಶಾಖೆಯಲ್ಲಿ ಇರಿಸಿದ್ದ ₹5.26 ಕೋಟಿ ನಿಶ್ಚಿತ ಠೇವಣಿಯನ್ನು, ನಕಲಿ ಖಾತೆ ತೆರೆದು ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಬ್ಯಾಂಕ್‌ನ ಅಧಿಕಾರಿಗಳು, ನಿಗಮದ ಕೆಲ ಸಿಬ್ಬಂದಿ ಮತ್ತು ಖಾಸಗಿ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದರು ಎಂದು ಇ.ಡಿ ಹೇಳಿದೆ.

2018ರ ಜುಲೈನಲ್ಲಿ ನಿಗಮದ ಹೆಸರಿನಲ್ಲಿ ಅದೇ ಶಾಖೆಯಲ್ಲಿ ಖಾತೆಗಳನ್ನು ತೆರೆದು, ನಿಶ್ಚಿತ ಠೇವಣಿಯ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ನಿಶ್ಚಿತ ಠೇವಣಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ನಿಗಮಕ್ಕೆ ನೀಡಲಾಗಿತ್ತು. ಚೆನ್ನೈನ ವೆಲ್ಹೋರಾ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ನ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಿ, ಹಣವನ್ನು ವರ್ಗಾಯಿಸಲಾಗಿತ್ತು ಎಂದು ಇ.ಡಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.