
ಬೆಂಗಳೂರು: ‘ಸಮಾಜದ ಪರಿವರ್ತನೆ ಮತ್ತು ಸುಧಾರಣೆ ಶಿಕ್ಷಣದಿಂದ ಸಾಧ್ಯ. ಸರ್ವರಿಗೂ ಶಿಕ್ಷಣ ಸಿಗುವಂತಾದರೆ ಸಾವಿತ್ರಿ ಬಾಯಿ ಫುಲೆಯವರ ಆಶಯ ಸಾಕಾರವಾಗಲಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್.ಎಂ. ಜಯಕರ ಹೇಳಿದರು.
ಸಾವಿತ್ರಿ ಬಾಯಿ ಫುಲೆ ಅವರ 195ನೇ ಜನ್ಮದಿನ ಆಚರಣೆ ಪ್ರಯುಕ್ತ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ವಿವಾಹದ ನಂತರ ವಿದ್ಯಾಭ್ಯಾಸ ಮಾಡಿ ದೇಶದ ಪ್ರಥಮ ಶಿಕ್ಷಕಿಯಾಗಿ ಸಾವಿತ್ರಿ ಬಾಯಿ ಫುಲೆ ಅವರು ಚರಿತ್ರೆ ಸೃಷ್ಟಿಸಿದರು. ಶಿಕ್ಷಣದ ಕ್ರಾಂತಿ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲಿದರು’ ಎಂದು ತಿಳಿಸಿದರು.
‘ಯುವ ಜನಾಂಗ ಶಿಕ್ಷಣದ ಮಹತ್ವ ತಿಳಿದು, ಸಾಮಾಜಿಕ ಸುಧಾರಣೆಗೆ ಅಸ್ತ್ರವಾಗಿ ಬಳಸಬೇಕು. ಉನ್ನತ ಶಿಕ್ಷಣ ಪಡೆಯುವಂತೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.