ADVERTISEMENT

‘ಈ ಹೊತ್ತಿಗೆ’ ಪ್ರಶಸ್ತಿ: ಕಥಾ–ಕವನ ಸಂಕಲನ ಆಹ್ವಾನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 13:59 IST
Last Updated 15 ಅಕ್ಟೋಬರ್ 2025, 13:59 IST
   

ಬೆಂಗಳೂರು: ‘ಈ ಹೊತ್ತಿಗೆ’ ಟ್ರಸ್ಟ್ 2026ನೇ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗೆ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಕವನ ಸಂಕಲನಗಳನ್ನು ಆಹ್ವಾನಿಸಿದೆ. 

ಈ ಪ್ರಶಸ್ತಿಯು ತಲಾ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಕಥಾ ಸಂಕಲನವು 8ರಿಂದ 10 ಕಥೆಗಳನ್ನು, ಕವನ ಸಂಕಲನವು 35ರಿಂದ 40 ಕವನಗಳನ್ನು ಒಳಗೊಂಡಿರಬೇಕು. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಆಯ್ಕೆಯಾದ ಕೃತಿಯು ಮುದ್ರಣಗೊಳ್ಳಬೇಕು. ಆಗ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಈ ಹೊತ್ತಿಗೆಯ ‘ಹೊನಲು’ ಸಮಾರಂಭದಲ್ಲಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗೂ ಒಳಪುಟದಲ್ಲಿ ಈ ಹೊತ್ತಿಗೆ (ಕಥೆ/ಕಾವ್ಯ) ಪ್ರಶಸ್ತಿ ವಿಜೇತ ಕೃತಿ ಎಂದು ಮುದ್ರಿಸಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ. 

ಅಪ್ರಕಟಿತ ಸಂಕಲನಗಳನ್ನು ಇದೇ 20ರೊಳಗೆ ‘ಈ ಹೊತ್ತಿಗೆ’, #65, ಮುಗುಳ್ನಗೆ, 3ನೇ ಅಡ್ಡ ರಸ್ತೆ, ಪಿ.ಎನ್‌.ಬಿ. ನಗರ, ಕೋಣನಕುಂಟೆ, ಬೆಂಗಳೂರು–560062 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಹೇಳಿದ್ದಾರೆ. ಸಂಪರ್ಕಕ್ಕೆ: 9611782621

ADVERTISEMENT