ADVERTISEMENT

ಗೃಹ ನಿರ್ಮಾಣ ಸಹಕಾರ ಸಂಘ: ಅ.14ರಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 19:49 IST
Last Updated 26 ಸೆಪ್ಟೆಂಬರ್ 2024, 19:49 IST
EVM-5-19
EVM-5-19   

ಬೆಂಗಳೂರು: ಕರ್ನಾಟಕ ಕಾರ್ಮಿಕ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಕ್ಟೋಬರ್‌ 14ರಂದು ಚುನಾವಣೆ ನಡೆಯಲಿದೆ.

ಬನ್ನೇರುಘಟ್ಟ ರಸ್ತೆಯ ಡೇರಿ ವೃತ್ತದಲ್ಲಿರುವ ಕಾರ್ಮಿಕ ಭವನದ ಆವರಣದಲ್ಲಿ ಮತದಾನ ನಡೆಯಲಿದ್ದು, ಅ.4ರಿಂದ ನಾಮಪತ್ರ ಸಲ್ಲಿಸಬಹುದು. 6ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 7ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮತದಾನಕ್ಕೆ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಕಚೇರಿ ಸಮಯದಲ್ಲಿ ಸಂಘದ ಮುಖ್ಯ ಪ್ರವರ್ತಕರಿಂದ ಗುರುತಿನ ಚೀಟಿ ಪಡೆಯಬಹುದು ಎಂದು ಚುನಾವಣಾಧಿಕಾರಿ ಆಂಜನಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT