
ಪ್ರಜಾವಾಣಿ ವಾರ್ತೆ
ವಿಧಾನಸೌಧ
ಬೆಂಗಳೂರು: ತಾಲ್ಲೂಕು ಆಸ್ಪತ್ರೆಗಳಲ್ಲಿ ಕಿವಿ, ಮೂಗು, ಗಂಟಲು (ಇಎನ್‌ಟಿ) ಶಸ್ತ್ರಚಿಕಿತ್ಸಾ ಸೇವೆ ಒದಗಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ದ್ವಿತೀಯ ಹಂತದ ಸೇವೆಗಳನ್ನು ಬಲಪಡಿಸಲು ತಾಲ್ಲೂಕು ಮಟ್ಟದ ಆರೋಗ್ಯ ಸಂಸ್ಥೆಗಳಲ್ಲಿ ಇಎನ್‌ಟಿ ಸೌಲಭ್ಯ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಧ್ವನಿ ನಿರೋಧಕ ಕೊಠಡಿಗಳಲ್ಲಿ ‘ಪ್ಯೂರ್ ಟೋನ್ ಆಡಿಯೊಮೆಟ್ರಿ’ ಸೌಲಭ್ಯ ಇರುವುದರಿಂದ, ಆ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ‘ಆಡಿಯಾಲಜಿಸ್ಟ್’ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ತಿಳಿಸಲಾಗಿದೆ.
ಬೂತ್‌ಲೆಸ್ ಆಡಿಯೊಮೀಟರ್‌ಗಳನ್ನು ನಿರ್ವಹಿಸಲು ‘ಆಡಿಯಾಲಜಿಸ್ಟ್’ಗಳು ಅಗತ್ಯವಿಲ್ಲದಿರುವುದರಿಂದ, ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬೂತ್‌ಲೆಸ್ ಆಡಿಯೋಮೀಟರ್‌ಗಳನ್ನು ಒದಗಿಸಬೇಕು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.