
ಬೆಂಗಳೂರು: ಸುಸ್ಥಿರ ಪ್ರತಿಭೆಗಳ ಸೃಷ್ಟಿಗೆ ‘ಈಸ್ಟ್ ಪಾಯಿಂಟ್ ಉದ್ಯಮ ನಾಯಕತ್ವ ಸಮಾವೇಶ-2026’ (ಇಪಿಐಎಲ್‌ಸಿ) ಅನ್ನು ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಹಮ್ಮಿಕೊಂಡಿತ್ತು.
‘ಭವಿಷ್ಯದ ಕಾರ್ಯಪಡೆಯ ರೂಪಿಸುವಿಕೆ’ ಎಂಬ ವಿಷಯದ ಕುರಿತು ನಡೆದ ಈ ಗೋಷ್ಠಿಯಲ್ಲಿ ಜಾಗತಿಕ ಮಟ್ಟದ ವಿವಿಧ ಕಂಪನಿಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ‘ಬದಲಾಗುತ್ತಿರುವ ಕಾರ್ಯಕ್ಷೇತ್ರಗಳಿಗೆ ಸುಸ್ಥಿರ ಪ್ರತಿಭೆಗಳ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ’ ಎಂಬ ವಿಷಯದ ಮೇಲೆ ಸಂವಾದ ನಡೆಯಿತು.
ಸಿಐಟಿಐನ ವೀರಣ್ಣಾಜಿ ಶಿವಣ್ಣ, ಸಿಸ್ಕೊದ ನಿತಿನ್ ಗುಡಿಮನಿ, ಸ್ನೋಫ್ಲೇಕ್‌ನ ರಾಜೇಶ್ ನಂಬಿಯಾರ್, ಯುಎಸ್‌ಟಿ ಗ್ಲೋಬಲ್‌ನ ಡಾ. ದಿನೇಶ್ ಮುರುಗನ್ ಮತ್ತು ಮೈಕ್ರೊಚಿಪ್ ಟೆಕ್ನಾಲಜಿಯ ಅಮಿತ್ ಶಾಲಿ ಅವರು ಭಾಗವಹಿಸಿದ್ದರು. ಬ್ಯಾಂಕಿಂಗ್, ಸೆಮಿಕಂಡಕ್ಟರ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಗಳ ಹೊಸ ನೇಮಕಾತಿ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.
ಗುಣಮಟ್ಟದ ನಿರಂತರತೆ, ಮೂಲಭೂತ ಜ್ಞಾನ, ಹೊಂದಾಣಿಕೆಯ ಸಾಮರ್ಥ್ಯ, ಪಠ್ಯಕ್ರಮದ ಬದಲಾವಣೆಯ ಮೂಲಕ ಉದ್ಯಮದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ಪರಿಷ್ಕರಣೆ, ಇಂಟರ್ನ್‌ಶಿಪ್‌ಗಳು ಮತ್ತು ಪ್ರಾಜೆಕ್ಟ್ ಆಧಾರಿತ ಕಲಿಕೆಗೆ ತಜ್ಞರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.