ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಅಸೆಂಟ್ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 98.47 ಫಲಿತಾಂಶ ಬಂದಿದೆ.
ಕಾಲೇಜಿನಲ್ಲಿ 70 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 150 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಚಾರ್ಯ ಬಿ.ಎಂ.ವೆಂಕಟೇಶ್ ತಿಳಿಸಿದರು.
ವಿದ್ಯಾರ್ಥಿನಿ ಸ್ಪಂದನ ಬಿ. (ವಾಣಿಜ್ಯ ವಿಭಾಗ) ಶೇ.98, ಪವಿತ್ರ ಜಿ. (ವಿಜ್ಞಾನ ವಿಭಾಗ) ಶೇ.97.17, ಖುಷಿ ಬಿ. ಶೇ 96.83, ತೇಜಸ್ವಿನಿ ಎಂ (ವಿಜ್ಞಾನ ವಿಭಾಗ) ಶೇ.95.33 ಅಂಕ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.