ADVERTISEMENT

ಮಚ್ಚು ತೋರಿಸಿ ಸುಲಿಗೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 16:12 IST
Last Updated 25 ನವೆಂಬರ್ 2025, 16:12 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ವಾರ್ತೆ

ADVERTISEMENT

ಬೆಂಗಳೂರು: ಆರ್‌.ಎಂ.ಸಿ.ಯಾರ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಾರ್ವಜನಿಕರಿಗೆ ಮಚ್ಚು ತೋರಿಸಿ, ಸುಲಿಗೆ ಮಾಡುತ್ತಿದ್ದ ಪ್ರಕರಣ ಸಂಬಂಧ ಬಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ.

ಟಿಂಬರ್ ಲೇಔಟ್‌ನ ಆಕಾಶ್, ಬಾಪೂಜಿ ನಗರದ ಎಸ್‌.ಕಿಶನ್ ಹಾಗೂ ಬಾಲಕನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಚ್ಚು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 11 ರಂದು ನವೀನ್ ಅವರು ತಮ್ಮ ಸ್ನೇಹಿತರಾದ ಗುರುಪ್ರಸಾದ್, ಶಿವಕುಮಾರ್ ಅವರೊಂದಿಗೆ ಜಿಕೆವಿಕೆಯಲ್ಲಿ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಹೋಗಲು ಗೋವರ್ಧನ್ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುವ ವೇಳೆ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿದ್ದರು. ಮಚ್ಚು ತೋರಿಸಿ, ಹಣ ನೀಡುವಂತೆ ಬೆದರಿಸಿ ₹100 ಕಿತ್ತುಕೊಂಡಿದ್ದರು. ಸಹಾಯಕ್ಕಾಗಿ ನವೀನ್ ಅವರು ಪೊಲೀಸ್ ಎಂದು ಕೂಗಿಕೊಂಡು ಓಡಲು ಶುರು ಮಾಡುತ್ತಿದ್ದಂತೆ ‌ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ತನಿಖೆ ಕೈಗೊಂಡ ಪೊಲೀಸರು, ಕೃತ್ಯದ ಸ್ಥಳದಲ್ಲಿ ದೊರೆತ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ಸ್ಯಾಟಲೈಟ್‌ ಬಸ್ ನಿಲ್ದಾಣ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಬಾಲಕನನ್ನು ತಮಿಳುನಾಡಿನ ರೈಲ್ವೆ ಚೈಲ್ಡ್‌ ಹೆಲ್ಪ್‌ ಡೆಸ್ಕ್‌ನವರು ಠಾಣೆಗೆ ಹಾಜರುಪಡಿಸಿದರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.