ADVERTISEMENT

ಆನೇಕಲ್: 2 ಖಾಸಗಿ ಶಾಲೆಗೆ ಹುಸಿ ಬಾಂಬ್ ಬೆದರಿಕೆ

ವಿದ್ಯಾರ್ಥಿಗಳು, ಪೋಷಕರು, ಶಾಲಾ ಸಿಬ್ಬಂದಿ ಆತಂಕ

​ಪ್ರಜಾವಾಣಿ ವಾರ್ತೆ
Published 9 ಮೇ 2023, 20:58 IST
Last Updated 9 ಮೇ 2023, 20:58 IST
ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಎಬಿನೇಜರ್ ಶಾಲೆಗೆ ಬಾಂಬ್ ಸಂದೇಶ ಬಂದಿದ್ದರಿಂದ ಪೊಲೀಸರು ತಪಾಸಣೆ ನಡೆಸಿದರು
ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಎಬಿನೇಜರ್ ಶಾಲೆಗೆ ಬಾಂಬ್ ಸಂದೇಶ ಬಂದಿದ್ದರಿಂದ ಪೊಲೀಸರು ತಪಾಸಣೆ ನಡೆಸಿದರು   

ಆನೇಕಲ್: ತಾಲ್ಲೂಕಿನ ಎರಡು ಖಾಸಗಿ ಶಾಲೆಗಳಿಗೆ ಮಂಗಳವಾರ ಹುಸಿ ಬಾಂಬ್‌ ಬೆದರಿಕೆ
ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಾಲ್ಲೂಕಿನ ಹುಸ್ಕೂರು ಸಮೀಪದ ಎಬಿನೇಜರ್‌ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಮಂಗಳವಾರ ಬೆಳಗ್ಗೆ ಶಾಲೆಯ ಇ-ಮೇಲ್‌ಗೆ ಸಂದೇಶ ಬಂದಿದೆ. ತಕ್ಷಣ ಶಾಲೆಯ ಆಡಳಿತ ಮಂಡಳಿಯು ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಿ, ಸಿಬ್ಬಂದಿಯನ್ನು ಶಾಲಾ ಆವರಣದಿಂದ ಹೊರ ಕಳುಹಿಸಿತು.

ಸ್ಥಳಕ್ಕೆ ಬಂದ ಹೆಬ್ಬಗೋಡಿ ಪೊಲೀಸರು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ. 

ADVERTISEMENT

ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿಯ ಬಾಲವಿದ್ಯಾ ಮಂದಿರ ಶಾಲೆಗೂ ಹುಸಿ ಬಾಂಬ್‌ ಕರೆ ಬಂದಿತ್ತು. ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದಾಗಿ ಸ್ಪಷ್ಟಪಡಿಸಿದರು. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2022ರ ಏಪ್ರಿಲ್‌ 8ರಂದು ತಾಲ್ಲೂಕಿನ ಐದು ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.