ADVERTISEMENT

ರಾಜ್ಯಕ್ಕೆ ಉಗ್ರರು ನುಸುಳಿದ್ದಾರೆ: ಹುಸಿ ಕರೆ ಮಾಡಿದ ಮಾಜಿ ಸೈನಿಕನ ಬಂಧನ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 6:36 IST
Last Updated 27 ಏಪ್ರಿಲ್ 2019, 6:36 IST
ಸುಂದರಮೂರ್ತಿ
ಸುಂದರಮೂರ್ತಿ   

ಬೆಂಗಳೂರು: ಉಗ್ರರು ನುಸುಳಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ಆರೋಪದಡಿ ಮಾಜಿ ಸೈನಿಕ ಸುಂದರಮೂರ್ತಿ ಎಂಬುವರನ್ನು ಅವಲಹಳ್ಳಿ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌.

ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿವೆಂಕಟೇಶ್ವರ ಲೇಔಟ್ ಮನೆಯಲ್ಲಿ ಸುಂದರಮೂರ್ತಿ ಬಂಧಿಸಿದರು. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಂಧಿಸಿ ವಿಚಾರಣೆ ನಡೆಸಿದರು.

'ನನ್ನ ಮನಸ್ಸಿಗೆ ಹಾಗೇ ಬಂತು ಕರೆ ಮಾಡಿದೆ. ಈಗ ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ ಆಗಿತ್ತು. ಹೀಗಾಗಿ ಅದೇ ರೀತಿ ಆಗಬಹುದು ಎಂದು ಊಹಿಸಿ ಕರೆ ಮಾಡಿದೆ' ಎಂದ ಆರೋಪಿ ಹೇಳಿದ್ದಾನೆ.

ಕೋಲಾರ ಎಸ್ಪಿ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರಿಂದ ರಾತ್ರಿ ತೀವ್ರ ಹುಡುಕಾಟ ನಡೆದಿತ್ತು. ಮೊಬೈಲ್ ಕರೆ ಲೊಕೇಶನ್‌ ಆಧರಿಸಿ ಅವರನ್ನು ಬಂಧಿಸಲಾಗಿದೆ.

ಸೈನ್ಯದಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದ ಆರೋಪಿ, ನಿವೃತ್ತಿ ಬಳಿಕ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ‌. ಸುಂದರಮೂರ್ತಿ ಅವರ ಇಬ್ಬರು ಮಕ್ಕಳು ಸೈನಿಕರಾಗಿದ್ದಾರೆ.ಒಬ್ಬ ಮಗ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.