ಬಿಎಂಟಿಸಿ
ಬೆಂಗಳೂರು: ವೈಟ್‌ಫೀಲ್ಡ್ ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಾಡುಗೋಡಿಯಿಂದ ಹವಾನಿಯಂತ್ರಿತ ಮೆಟ್ರೊ ಫೀಡರ್ ಬಸ್‌ಗಳ ಕಾರ್ಯಾಚರಣೆ ನಡೆಸಲು ಬಿಎಂಟಿಸಿ ನಿರ್ಧರಿಸಿದೆ.
ಜ.6 ರಿಂದ ಕಾಡುಗೋಡಿಯಿಂದ ಎರಡು ಮಾರ್ಗಗಳಲ್ಲಿ ತಲಾ ಎರಡು ಬಸ್‌ಗಳು ಒಟ್ಟು 29 ಟ್ರಿಪ್‌ಗಳಲ್ಲಿ ಸಂಚರಿಸಲಿವೆ.
ಹೋಫ್‌ಫಾರಂ, ಐಟಿಪಿಎಲ್, ವೈಟ್‌ಫೀಲ್ಡ್ ಟಿಟಿಎಂಸಿ, ಗ್ರಾಫೈಟ್ ಇಂಡಿಯಾ, ಕುಂದಲಹಳ್ಳಿ ಗೇಟ್, ವರ್ತೂರು ಕೋಡಿ, ವೈಟ್‌ಫೀಲ್ಡ್ ಪೋಸ್ಟ್ ಆಫೀಸ್ ಮೂಲಕ 14 ಟ್ರಿಪ್‌ಗಳಿದ್ದರೆ. ಹೋಫ್‌ಫಾರಂ, ವೈಟ್‌ಫೀಲ್ಡ್ ಪೋಸ್ಟ್ ಆಫೀಸ್, ವರ್ತೂರು ಕೋಡಿ, ಕುಂದಲಹಳ್ಳಿ ಗೇಟ್, ಗ್ರಾಫೈಟ್ ಇಂಡಿಯಾ, ವೈಟ್‌ಫೀಲ್ಡ್ ಟಿಟಿಎಂಸಿ, ಐಟಿಪಿಎಲ್ ಮಾರ್ಗದ ಮೂಲಕ 15 ಟ್ರಿಪ್‌ಗಳಲ್ಲಿ ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.