ADVERTISEMENT

ತೆರಿಗೆ ವಂಚನೆ: ಐಷಾರಾಮಿ ಕಾರುಗಳಿಗೆ ದಂಡ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 16:08 IST
Last Updated 16 ಜೂನ್ 2025, 16:08 IST
ಐಶಾರಾಮಿ ಕಾರುಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ತಂಡ ವಶಪಡಿಸಿಕೊಂಡಿತು
ಐಶಾರಾಮಿ ಕಾರುಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ತಂಡ ವಶಪಡಿಸಿಕೊಂಡಿತು   

ಬೆಂಗಳೂರು: ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ರೋಲ್ಸ್ ರಾಯ್ಸ್ ಕುಲಿನನ್, ಮರ್ಸಿಡಿಸ್ ಬೆಂಜ್‌, ಪೋರ್ಷೆ,  ಔಡಿ ಕಾರು ಸೇರಿದಂತೆ ದುಬಾರಿ ಬೆಲೆಯ ಐದು ಐಷಾರಾಮಿ ಕಾರುಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ವೇಳೆ ನಕಲಿ ನೋಂದಣಿ ಹೊಂದಿದ್ದ ಒಂದು ಕಾರು ಕೂಡ ಪತ್ತೆಯಾಗಿದೆ.

ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ನೇತೃತ್ವದಲ್ಲಿ ಬೆಂಗಳೂರು ಮತ್ತು ಮೈಸೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಂಜಿತ್‌ ಎನ್‌., ಇಮ್ತಿಯಾಜ್‌ ಪಾಷ, ಕುಮಾರಸ್ವಾಮಿ, ವಿಜಯಕುಮಾರ್‌, ರಾಮಚಂದ್ರ, ಅಲಿ ಉದ್ದೀನ್‌ ತಂಡ ಕಾರ್ಯಾಚರಣೆ ನಡೆಸಿತ್ತು.

₹ 2 ಕೋಟಿ ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಕಾರು ನಕಲಿ ದಾಖಲೆಗಳನ್ನು ಹೊಂದಿತ್ತು. ಉಳಿದ ನಾಲ್ಕು ಕಾರುಗಳು ಪುದುಚೇರಿಯ ನೋಂದಣಿ ಹೊಂದಿರುವ ರಾಜ್ಯದ ಕಾರುಗಳಾಗಿದ್ದವು.

ADVERTISEMENT

ವಶಪಡಿಸಿಕೊಂಡಿರುವ ಕಾರುಗಳ ಮಾಲೀಕರಿಂದ ₹ 3.02 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.