ಬೆಂಕಿ ಅವಘಡ (ಪ್ರಾತಿನಿಧಿಕ ಚಿತ್ರ)
ಯಲಹಂಕ: ಕೋಗಿಲು ಬಡಾವಣೆಯ ಬಂಡೆ ರಸ್ತೆಯ ಅಂಬೇಡ್ಕರ್ ಕಾಲೊನಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿವೆ.
ಬಿಬಿಎಂಪಿ ಪೌರ ಕಾರ್ಮಿಕ ಸೀನಪ್ಪ ಅವರ ಮನೆಯಲ್ಲಿ ಘಟನೆ ನಡೆದಿದೆ.
‘ಮನೆಯ ಗೋಡೆ ಮತ್ತು ಮೇಲಿನ ಶೀಟ್ ಬಿರುಕು ಬಿಟ್ಟಿದೆ. ಮಧ್ಯಾಹ್ನ ಅಡುಗೆ ಸಿದ್ಧಪಡಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿತು. ಆರಂಭದಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದೆವು. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಪತ್ನಿ, ಅತ್ತೆ ಹಾಗೂ ಮೂವರು ಮಕ್ಕಳು ಮನೆಯಿಂದ ಹೊರಬಂದು ಪಾರಾದರು. ಅಕ್ಕಪಕ್ಕದ ಮನೆಯವರು ನೀರು ಮತ್ತು ಗೋಣಿಚೀಲ ಬಳಸಿ ಬೆಂಕಿಯನ್ನು ನಂದಿಸಿದರು’ ಎಂದು ಸೀನಪ್ಪ ತಿಳಿಸಿದರು.
ಘಟನೆಯಿಂದ ಮನೆಯಲ್ಲಿದ್ದ ಫ್ರಿಡ್ಜ್, ಟಿ.ವಿ ಮತ್ತು ಅಡುಗೆ ಪಾತ್ರೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.