ADVERTISEMENT

ಪಟಾಕಿ ಕಿಡಿ ತಗುಲಿ ಫರ್ನಿಚರ್ ತಯಾರಿಕಾ ಘಟಕಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:14 IST
Last Updated 7 ನವೆಂಬರ್ 2018, 20:14 IST
ಚಂದಾಪುರದ ಬನಹಳ್ಳಿ ಬಳಿ ಪಟಾಕಿಯ ಕಿಡಿ ತಗುಲಿ ಹೊತ್ತಿ ಉರಿಯುತ್ತಿರುವ ಫರ್ನಿಚರ್ ತಯಾರಿಕಾ ಘಟಕ
ಚಂದಾಪುರದ ಬನಹಳ್ಳಿ ಬಳಿ ಪಟಾಕಿಯ ಕಿಡಿ ತಗುಲಿ ಹೊತ್ತಿ ಉರಿಯುತ್ತಿರುವ ಫರ್ನಿಚರ್ ತಯಾರಿಕಾ ಘಟಕ   

ಆನೇಕಲ್: ಚಂದಾಪುರ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿ ಬನಹಳ್ಳಿ ರಾಘವೇಂದ್ರ ಬಡಾವಣೆಯಲ್ಲಿ ಬುಧವಾರ ರಾತ್ರಿ ಫರ್ನಿಚರ್ ತಯಾರಿಕಾ ಘಟಕಕ್ಕೆ ಪಟಾಕಿಯ ಕಿಡಿ ಬಿದ್ದು ಬೆಂಕಿ ಹೊತ್ತುಕೊಂಡು ನಾಲ್ಕು ಅಂತಸ್ತಿನ ಕಟ್ಟಡ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿವೆ.

ಕೇರಳ ಮೂಲದ ಶೆಫಿ ಎಂಬುವರು ಹಲವು ವರ್ಷಗಳಿಂದ ಬನಹಳ್ಳಿಯಲ್ಲಿ ಸೋಫಾ ತಯಾರಿಕಾ ಘಟಕ ನಡೆಸುತ್ತಿದ್ದರು. ದೀಪಾವಳಿಯ ಪಟಾಕಿ ಸಂಭ್ರಮದಲ್ಲಿ ಪಟಾಕಿಯ ಕಿಡಿ ಸೋಫಾ ತಯಾರಿಕಾ ಘಟಕಕಕ್ಕೆ ಹಾರಿದ್ದು ಇದರಿಂದ ಸೋಫಾ ತಯಾರಿಕೆಗೆ ಬಳಸುವ ರೆಕ್ಸಿನ್ ಸೇರಿದಂತೆ ಕಚ್ಚಾ ವಸ್ತುಗಳಿಗೆ ಬೆಂಕಿ ತಗುಲಿತು.

ಸೋಫಾ ತಯಾರಿಕೆ ಮಾಡುತ್ತಿದ್ದ ಕೆಲಸಗಾರರು ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ನಿಯಂತ್ರಣಕ್ಕೆ ಬರಲಿಲ್ಲ. ಇದರಿಂ
ದಾಗಿ ಕಟ್ಟಡ ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೋಫಾ ತಯಾರಿಕಾ ಕಚ್ಚಾ ಸಾಮಗ್ರಿಗಳು ಹಾಗೂ ಸೋಫಾಗಳು ಸುಟ್ಟು ಹೋಗಿವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಬಂದಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.