ADVERTISEMENT

ಡಿಜೆ ಹಳ್ಳಿ ಠಾಣೆಗೆ ನುಗ್ಗಿ, ವಾಹನಕ್ಕೆ ಬೆಂಕಿ; 300 ಮಂದಿ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 9:05 IST
Last Updated 13 ಆಗಸ್ಟ್ 2020, 9:05 IST
ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಮುಂದೆ ಇದ್ದ ಪೊಲೀಸ್‌ ಬಸ್ ಮತ್ತು ವಾಹನಗಳನ್ನು ಸುಟ್ಟುಹಾಕಿರುವುದು
ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಮುಂದೆ ಇದ್ದ ಪೊಲೀಸ್‌ ಬಸ್ ಮತ್ತು ವಾಹನಗಳನ್ನು ಸುಟ್ಟುಹಾಕಿರುವುದು   

ಬೆಂಗಳೂರು: ಡಿ.ಜೆ.ಹಳ್ಳಿ ಠಾಣೆಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ವಾಹನಗಳಿಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದ ಎಸ್‌ಡಿಪಿಐ ಮುಖಂಡರು ಸೇರಿದಂತೆ 300 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಶಿವಾಜಿನಗರದ ಅಫ್ನಾನ್, ಮುಜಾಮ್ಮಿಲ್ ಪಾಷ, ಸೈಯದ್ ಮಸೂದ್, ಅಯಾಜ್, ಅಲ್ಲಾಭಕ್ಷ ಪ್ರಮುಖ ಆರೋಪಿಗಳು. 300ಕ್ಕೂ ಹೆಚ್ಚು ಜನರ ಗುಂಪು ಕಟ್ಟಿಕೊಂಡು ಠಾಣೆಗೆ ನುಗ್ಗಿದ್ದ ಇವರು, ಪೊಲೀಸರ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಯತ್ನಿಸಿದ್ದರು. ಠಾಣೆ ಕಟ್ಟಡದ ಗಾಜು ಒಡೆದರು. ಕಾರು ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ನಂತರವೇ ಗಲಭೆ ಸೃಷ್ಟಿಸಿದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಠಾಣೆಗೆ ನುಗ್ಗಿದ ವೇಳೆ ಆರೋಪಿಗಳು, ಇನ್‌ಸ್ಪೆಕ್ಟರ್ ಕೇಶವಮೂರ್ತಿ, ಠಾಣೆ ಸಿಬ್ಬಂದಿ ಶ್ರೀಧರ್ ಹಾಗೂ ಹಲವರ ಮೇಲೆ ಹಲ್ಲೆ‌ ನಡೆಸಿದ್ದಾರೆ. ಹೀಗಾಗಿ, ಘಟನೆ ಬಗ್ಗೆ ಕೇಶವಮೂರ್ತಿ ಅವರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.