ADVERTISEMENT

‘ನೆರೆ ಪರಿಹಾರ ಜೋಳಿಗೆ’ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:39 IST
Last Updated 9 ಆಗಸ್ಟ್ 2019, 19:39 IST
   

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಸಂಗ್ರಹಿಸುವ ಉದ್ದೇಶದಿಂದಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘವುಇದೇ 14ರಂದು ಪುರಭವನದಿಂದ ವಿಧಾನಸೌಧದವರೆಗೆ‘ನೆರೆ ಪರಿಹಾರ ಜೋಳಿಗೆ’ ಪಾದಯಾತ್ರೆ ಹಮ್ಮಿಕೊಂಡಿದೆ.

‘ಉತ್ತರ ಕರ್ನಾಟಕದ 162 ಹಳ್ಳಿಗಳು ಜಲಾವೃತವಾಗಿದೆ. ಅನೇಕ ಜನ ಮನೆ, ಆಸ್ತಿ, ಜಾನುವಾರು ಕಳೆ ದುಕೊಂಡು ಬೀದಿಪಾಲಾಗಿ ದ್ದಾರೆ. ದಯಮಾಡಿ ಬೆಂಗಳೂರಿನ ಜನರು ಸಂತ್ರಸ್ತರಿಗೆ ನೆರವಾಗಬೇಕು. ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿ ಕೊಳ್ಳುವ ಇಲಾಖೆಗಳು ಹಾಗೂ ಅಧಿಕಾರಿಗಳ ಕಚೇರಿಗಳನ್ನುಬೆಳಗಾವಿ ಸುವರ್ಣ ಸೌಧಕ್ಕೆ ಕೂಡಲೇ ಸ್ಥಳಾಂತರಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ವೀರಣ್ಣ ಮತ್ತಿಕಟ್ಟಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಅಖಿಲ ಭಾರತ ವೀರಶೈವ ಮಹಾ ಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌.ತಿಪ್ಪಣ್ಣ, ಸಂಘದ ಅಧ್ಯಕ್ಷಮುರಿಗೇಶ ಜವಳಿ ಇದ್ದರು.

ADVERTISEMENT

ಪ್ಲಾಸ್ಟಿಕ್‌ ತ್ಯಾಜ್ಯ 30ಕ್ಕೆ ವಿಚಾರ ಸಂಕಿ ರಣ: ‘ಲಯನ್ ಇಂಡಿಯಾ ರಿಸರ್ಚ್‌ ಇನ್ನೊವೇಷನ್ ಪ್ರೈವೇಟ್‌ ವತಿಯಿಂದ ‘ಪ್ಲಾಸ್ಟಿಕ್ ತ್ಯಾಜ್ಯ:ಹೊಸ ಪರಿಹಾರಗಳು’ ವಿಷಯ ಕುರಿತು ವಿಚಾರ ಸಂಕಿರಣ ಇದೇ 30 ರಂದುಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ (ಐಐಎಸ್‌ಸಿ) ಜೆ.ಎನ್‌.ಟಾಟಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಸ್‌.ಗಣಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.