ADVERTISEMENT

ಅಸಹಾಯಕರಿಗೆ ಉಚಿತ ಆಹಾರ ಪೂರೈಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 10:42 IST
Last Updated 30 ಮಾರ್ಚ್ 2020, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ನಾಗರಭಾವಿ ಸುತ್ತ–ಮುತ್ತ ಅಸಹಾಯಕರಿಗೆ ಉಚಿತವಾಗಿ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಪೆಲೇಟ್‌ ಹೋಟೆಲ್‌ ಸಂಸ್ಥೆಯ ಮಾಲೀಕರು ಮತ್ತು ಸ್ನೇಹಿತರು ಮಾನವೀಯತೆ ಮೆರೆಯುತ್ತಿದ್ದಾರೆ.

‘ಲಾಕ್‌ಡೌನ್‌ನಿಂದ ತೊಂದರೆಗೀಡಾಗಿರುವ ದಿನಗೂಲಿ ನೌಕರರು, ಕಾರ್ಮಿಕರು ಮತ್ತು ಬಡವರಿಗೆ ಮೂರು ದಿನಗಳಿಂದ ಮಧ್ಯಾಹ್ನ ಮತ್ತು ರಾತ್ರಿ ಉಚಿತವಾಗಿ ಊಟ ಪೂರೈಸುತ್ತಿದ್ದೇವೆ. ನಾಗರಭಾವಿ ಮತ್ತು ಸುತ್ತ–ಮುತ್ತಲಿನ ಪ್ರದೇಶದವರಿಗೆ ಈ ಸೇವೆ ಒದಗಿಸುತ್ತಿದ್ದೇವೆ’ ಎಂದು ಪೆಲೇಟ್‌ ಹೋಟೆಲ್‌ನ ಮಾಲೀಕ ಬಿ.ಎನ್. ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ 500ಕ್ಕೂ ಹೆಚ್ಚು ಜನರಿಗೆ ಪಾಕೆಟ್‌ನಲ್ಲಿ ಎರಡು ಹೊತ್ತು ಊಟ ಒದಗಿಸುತ್ತಿದ್ದೇವೆ. ದಿನೇಶ್‌ ಅವರ ಜೊತೆ ಕೈಜೋಡಿಸಿದ್ದೇವೆ. ನಾಲ್ಕೈದು ಜನ ಈ ಕಾರ್ಯ ಮಾಡುತ್ತಿದ್ದೇವೆ’ ಎಂದು ರಾಜೇಶ್‌ ಪಾಟೀಲ ಹೇಳಿದರು.

ADVERTISEMENT

ಆಹಾರದ ಅಗತ್ಯವಿರುವವರು 98452–95510, 98451–19494 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.