ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್‌ನಲ್ಲಿ ನಿವಾಸಿಗಳಿಗೆ ಆಹಾರ ಸಚಿವ ಕೆ.ಗೋಪಾಲಯ್ಯ ಹಕ್ಕುಪತ್ರ ವಿತರಿಸಿದರು.
ನಂತರ ಮಾತನಾಡಿದ ಸಚಿವರು, ‘2013ರಲ್ಲಿ ಶಾಸಕನಾಗಿ ಆಯ್ಕೆಯಾದಾಗ 927 ಮನೆಗಳ ನೋಂದಣಿ ಬಾಕಿ ಇತ್ತು. ಅದರಲ್ಲಿ 570 ಜನರಿಗೆ ಹಕ್ಕು ಪತ್ರ ನೋಂದಣಿ ಮಾಡಿಸಿ ಮಾಲೀಕತ್ವ ನೀಡಲಾಗಿತ್ತು. ಸಚಿವನಾದ ನಂತರ ಕಂಠೀರವ ನಗರದ ಜಾರಕ್ ಬಂಡೆಯ 33 ನಿವಾಸಿಗಳಿಗೆ ಮನೆ ಜಾಗದ ಮಾಲೀಕತ್ವ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಬಾಕಿ ಇರುವ 327 ಜನರಿಗೆ ಜಾಗದ ಮಾಲೀಕತ್ವದ ನೋಂದಣಿ ಮಾಡಿಸಿ ನಿವಾಸಿಗಳಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.