ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಕಾರ್ಯಕರ್ತರೊಂದಿಗೆ ರಸ್ತೆ ಸ್ವಚ್ಛಗೊಳಿಸಿದರು.
ಕೆ.ಆರ್.ಪುರ: ‘ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ದೃಷ್ಟಿಯಿಂದ ಕಾರ್ಯಕರ್ತರು ಪಟಾಕಿ ಸುಡುವುದನ್ನು ಬಿಟ್ಟು, ಸ್ವಚ್ಚತೆಗೆ ಆದ್ಯತೆ ನೀಡಬೇಕು’ ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.
ವೈಟ್‌ಫೀಲ್ಡ್‌ನಲ್ಲಿ ಕೆಫೆಯೊಂದರ ಉದ್ಘಾಟನೆಗೆ ಬಂದ ಅವರನ್ನು ಸ್ವಾಗತಿಸಲು ಕಾರ್ಯಕರ್ತರು ರಸ್ತೆಯಲ್ಲಿ ಪಟಾಕಿ ಸಿಡಿಸಿದರು. ಇದರಿಂದ ರಸ್ತೆಯಲ್ಲಿ ಪಟಾಕಿಯ ತಾಜ್ಯ ಹರಡಿಕೊಂಡಿತ್ತು. ಇದನ್ನು ಕಂಡ ಲಿಂಬಾವಳಿ, ಪೂರೆಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದರು. ಅವರೊಂದಿಗೆ ಕಾರ್ಯಕರ್ತರು ಸೇರಿ ಸ್ವಚ್ಛತಾ ಕಾರ್ಯ ಕೈಗೊಂಡರು.
ನಂತರ ಮಾತನಾಡಿದ ಅವರು, ‘ಪಟಾಕಿ ಸಿಡಿಸಿ ಯಾರನ್ನೂ ಸ್ವಾಗತಿಸುವುದು ಬೇಡ. ಇದರಿಂದ ಪರಿಸರ ಮಾಲಿನ್ಯ ಜೊತೆಗೆ, ತ್ಯಾಜ್ಯ ಹೆಚ್ಚಾಗುತ್ತದೆ. ಇದು ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಯಾವುದೇ ಸಂದರ್ಭದಲ್ಲೂ ಪಟಾಕಿ ಹಚ್ಚಿ ಯಾರಿಗೂ ತೊಂದರೆ ನೀಡಬಾರದು’ ಎಂದು ತಿಳಿಸಿದರು.
ಮಹದೇವಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.