ಮೈಸೂರು: ಮೈಸೂರು – ಬೆಂಗಳೂರು – ಯಲಹಂಕ ನಡುವೆ ಹೊಸ ‘ಮೆಮು’ ರೈಲು ಸೋಮವಾರ ರಾತ್ರಿ ಸಂಚಾರ ಆರಂಭಿಸಿತು.
ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ನೈರುತ್ಯ ರೈಲ್ವೆ ಸ್ಪಂದಿಸಿದ್ದು, ಈ ರೈಲು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ. ಇದಕ್ಕೆ ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು.
‘ಮೈಸೂರು – ಬೆಂಗಳೂರು ಮಾರ್ಗವಾಗಿ ರೈಲುಗಳ ಸಂಖ್ಯೆ ಈಗ ಹೆಚ್ಚಿದ್ದು ಪ್ರಯಾಣಿಕರು ಆರಾಮಾಗಿ ಸಂಚರಿಸಲು ಸಾಧ್ಯವಾಗಿದೆ. ಇದಕ್ಕೆ ನಾಲ್ಕನೇ ಸೇರ್ಪಡೆಯಾಗಿ ಈ ‘ಮೆಮು’ ರೈಲು ಸಂಚಾರ ಆರಂಭಿಸಿದೆ’ ಎಂದು ಪ್ರತಾಪಸಿಂಹ ತಿಳಿಸಿದರು. ಮೈಸೂರಿನಿಂದ ಪ್ರತಿದಿನ ರಾತ್ರಿ 10.20ಕ್ಕೆ ಈ ರೈಲು (06562) ಹೊರಡಲಿದೆ. ರಾತ್ರಿ 1.30ಕ್ಕೆ ಯಲಹಂಕ ನಿಲ್ದಾಣ ತಲುಪಲಿದೆ. ರಾತ್ರಿ 2.30ಕ್ಕೆ ಯಲಹಂಕದಿಂದ ಹೊರಡಲಿರುವ ರೈಲು (06561), ಬೆಳಿಗ್ಗೆ 5.35ಕ್ಕೆ ಮೈಸೂರು ಸೇರಲಿದೆ.
ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ನಿರ್ವಹಣಾ ವ್ಯವಸ್ಥಾಪಕ ಸತೀಶ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಯತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.