ADVERTISEMENT

ಫಾಕ್ಸ್‌ಕಾನ್‌ನಿಂದ ಕರ್ನಾಟಕದಲ್ಲಿ ಐಪೋನ್‌ ಘಟಕ ಸ್ಥಾಪಿಸಲು ₹8,800 ಕೋಟಿ ಹೂಡಿಕೆ

ಸೋಮವಾರ ವಿಧಾನಸೌಧದಲ್ಲಿ ಫಾಕ್ಸ್‌ಕಾನ್‌ ಇಂಡಸ್ಟ್ರೀಯಲ್ ಇಂಟರ್ನೆಟ್ (FII) ಸಂಸ್ಥೆಯ ಸಿಇಒ Brand Cheng ನೇತೃತ್ವದ ನಿಯೋಗ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2023, 10:47 IST
Last Updated 17 ಜುಲೈ 2023, 10:47 IST
ಸೋಮವಾರ ವಿಧಾನಸೌಧದಲ್ಲಿ ಫಾಕ್ಸ್‌ಕಾನ್‌ ಇಂಡಸ್ಟ್ರೀಯಲ್ ಇಂಟರ್ನೆಟ್ (FII) ಸಂಸ್ಥೆಯ ಸಿಇಒ Brand Cheng ನೇತೃತ್ವದ ನಿಯೋಗ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿತು. ಪ್ರಿಯಾಂಕ್ ಖರ್ಗೆ ಇದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಫಾಕ್ಸ್‌ಕಾನ್‌ ಇಂಡಸ್ಟ್ರೀಯಲ್ ಇಂಟರ್ನೆಟ್ (FII) ಸಂಸ್ಥೆಯ ಸಿಇಒ Brand Cheng ನೇತೃತ್ವದ ನಿಯೋಗ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿತು. ಪ್ರಿಯಾಂಕ್ ಖರ್ಗೆ ಇದ್ದಾರೆ.   

ಬೆಂಗಳೂರು: ತೈವಾನ್‌ನ ಫಾಕ್ಸ್‌ಕಾನ್‌ ಸಂಸ್ಥೆ ಕರ್ನಾಟಕದಲ್ಲಿ ಐಪೋನ್‌ಗಳ ಹೊರ ಕವಚ ತಯಾರಿಸುವ ಘಟಕ ಸ್ಥಾಪಿಸಲು ಸುಮಾರು ₹ 8,800 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಫಾಕ್ಸ್‌ಕಾನ್‌ ಇಂಡಸ್ಟ್ರೀಯಲ್ ಇಂಟರ್ನೆಟ್ (FII) ಸಂಸ್ಥೆಯ ಸಿಇಒ Brand Cheng ನೇತೃತ್ವದ ನಿಯೋಗವನ್ನು ಭೇಟಿಮಾಡಿ ಬಳಿಕ ಅವರು ಈ ವಿಷಯ ತಿಳಿಸಿದರು.

ತುಮಕೂರಿನ ಬಳಿ ಇರುವ ಜಪಾನೀಸ್ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ 100 ಎಕರೆ ಭೂಮಿ ಇದ್ದು, ಉದ್ದಿಮೆ ಸ್ಥಾಪಿಸಲು ಒಳ್ಳೆಯ ವಾತಾವರಣ ಇದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

ADVERTISEMENT

ಈ ಹೊಸ ಘಟಕದಿಂದ ಸುಮಾರು 14,000 ಕ್ಕೂ ಹೆಚ್ಚು ಉದ್ಯೋಗಗಳು ದೊರೆಯಲಿವೆ. ಉದ್ಯಮ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಫಾಕ್ಸ್‌ಕಾನ್‌ ನಿಯೋಗದ ಜೊತೆ ಎಂಬಿ ಪಾಟೀಲ್ ಅವರು ಸಭೆ ನಡೆಸಿದರು. ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.