ADVERTISEMENT

ಡಿ.ರೂಪಾ ಫೊಟೊ ಬಳಸಿ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 20:22 IST
Last Updated 23 ಡಿಸೆಂಬರ್ 2020, 20:22 IST
ಡಿ.ರೂಪಾ
ಡಿ.ರೂಪಾ   

ಬೆಂಗಳೂರು: ಅಸ್ಸಾಂನ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳಿಗೆ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ (ಐಪಿಎಸ್) ಅವರ ಫೊಟೊ ಬಳಸಿ, ಹಲವರಿಂದ ಹಣ ವಸೂಲಿ ಮಾಡುತ್ತಿರುವ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ‍ಪ್ರಕರಣ ದಾಖಲಾಗಿದೆ.

ಆರೋಪಿ ಮೊದಲಿಗೆ ‘ಸಕೋಲಿನ್ಚೌಧರಿ ಶರ್ಮಾ’ ಹೆಸರಿನಲ್ಲಿಫೇಸ್‍ಬುಕ್‍ ಖಾತೆ ಸೃಷ್ಟಿಸಿದ್ದ. ಅದಕ್ಕೆ ರೂಪಾ ಅವರ ಫೊಟೊ ಬಳಸಿಕೊಂಡು ಹಲವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ್ದ. ತಾನು ಅಸ್ಸಾಂ ಸಿವಿಲ್ ಸರ್ವೆಂಟ್ ಎಂದುಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ, ಹಲವರ ಮೊಬೈಲ್‌ ನಂಬರ್‌ಗಳನ್ನು ಸಂಗ್ರಹಿಸಿದ್ದ ಎನ್ನಲಾಗಿದೆ.

30ಕ್ಕೂ ಹೆಚ್ಚು ನಂಬರ್‌ಗಳಿದ್ದ ವಾಟ್ಸ್ಆ್ಯಪ್‌ ಗುಂಪೊಂದನ್ನು ರಚಿಸಿದ್ದ. ಕೆಲವರಿಗೆ ಸಂದೇಶ ಮಾತ್ರವಲ್ಲದೆ, ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿದ್ದ. ಚಾರಿಟಿಯೊಂದರ ವಿಚಾರವಾಗಿ ಹಣ ಕೇಳುತ್ತಿದ್ದ. ಇದನ್ನು ನಂಬಿ ಹಲವರು ಹಣ ದೇಣಿಗೆಯಾಗಿ ನೀಡಿ ವಂಚನೆಗೆ ಒಳಗಾಗಿದ್ದಾರೆ.

ADVERTISEMENT

‘ಪ್ರಣಾಮಿಕಾ ಮಹಾಂತಾಸ್‌’ ಎಂಬ ಹೆಸರಿನಲ್ಲೂ ಫೇಸ್‌ಬುಕ್‌ನಲ್ಲಿದ್ದ ಖಾತೆಗೆ ರೂಪಾ ಅವರ ಫೋಟೊ ಬಳಕೆ ಮಾಡಲಾಗಿತ್ತು. ಅಲ್ಲಿಯೂ ಹೀಗೇ ವಂಚಿಸುತ್ತಿದ್ದ. ಫೇಸ್‌ಬುಕ್ ಖಾತೆಗಳಿಂದ ಅನುಮಾನಗೊಂಡ ಅಸ್ಸಾಂ ಮೂಲದ ಮೂವರು ಈ ಘಟನೆಗಳನ್ನು ರೂಪಾ ಅವರಿಗೆ ವಿವರಿಸಿದ್ದಾರೆ.

‘ಅಸ್ಸಾಂನಿಂದ ನನಗೆ ಮೂರು ಕರೆಗಳು ಬಂದವು. ಫೇಸ್‌ಬುಕ್‌ನಲ್ಲಿ ನನ್ನ ಫೊಟೊ ಬಳಸಿ, ಮಹಿಳೆ ಧ್ವನಿಯಲ್ಲಿ ಮಾತನಾಡಿ, ಹಲವರಿಗೆ ವಂಚಿಸಿದ್ದಾರೆ. ಇದನ್ನು ಸೈಬರ್‌ ಕ್ರೈಂ ವಿಭಾಗದ ಗಮನಕ್ಕೆ ತಂದಿದ್ದೇನೆ. ಈ ರೀತಿಯ ವಂಚಕರಿಂದ ಸಾರ್ವಜನಿಕರು ಎಚ್ಚರವಾಗಿರಿ. ಇಂತಹವರಿಗೆ ಹಣ ನೀಡಬೇಡಿ’ ಎಂದು ರೂಪಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.