ADVERTISEMENT

ಬೆಂಗಳೂರು: ಉಚಿತ ನೇತ್ರ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 20:11 IST
Last Updated 16 ಅಕ್ಟೋಬರ್ 2025, 20:11 IST
   

ಬೆಂಗಳೂರು: ಖಿವರಾಜ್ ಮೋಟಾರ್ಸ್, ಅದ್ವಿತೀಯ ಮೋಟಾರ್ಸ್, ವಿಠಲ ಕಣ್ಣಿನ ಚಿಕಿತ್ಸಾಲಯ ಹಾಗೂ ರೋಟರಿ ಬೆಂಗಳೂರು ಮಿಡ್‌ಟೌನ್ ಜಂಟಿಯಾಗಿ ಇದೇ 17 ಮತ್ತು 18ರಂದು ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಯಶವಂತಪುರದ ಖಿವರಾಜ್ ಎಲಿಕ್ಸಿರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಆಟೊ ಚಾಲಕರಿಗೆ ಎರಡು ದಿನಗಳ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. 

‘ಪ್ರಾಜೆಕ್ಟ್ ಸೇಫ್ ವಿಷನ್–2025’ ಎಂಬ ಉಪಕ್ರಮವು ನಗರದ ಆಟೊ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಮತ್ತು ಅಗತ್ಯವಿದ್ದರೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡುವ ಉದ್ದೇಶವಿದೆ. ಈ ಯೋಜನೆಯು ರೋಟರಿ ಬೆಂಗಳೂರು ಮಿಡ್‌ಟೌನ್ ಅಧ್ಯಕ್ಷ ರಾಜೇಶ್ ಶಾ, ಯುವ ಸೇವಾ ನಿರ್ದೇಶಕ ವಿನಯ್ ಚೋರಾಡಿಯಾ ಮತ್ತು ರೂಪಮೌಳಿ ಮೈಸೂರು ನೇತೃತ್ವದಲ್ಲಿ ನಡೆಯಲಿದೆ. 300ಕ್ಕೂ ಹೆಚ್ಚು ಆಟೊ ಚಾಲಕರು ಇದರ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ: 63602 34388 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT