ADVERTISEMENT

ಬೆಂಗಳೂರು: ಆರೋಗ್ಯ ಉಚಿತ ಶಿಬಿರ ನಾಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:38 IST
Last Updated 24 ಅಕ್ಟೋಬರ್ 2025, 23:38 IST
   

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ (ಫನಾ) ರಜತ ಮಹೋತ್ಸವದ ಅಂಗವಾಗಿ ಇದೇ ಭಾನುವಾರ ‘ಫನಾ ಕ್ರಿಕೆಟ್ ಪಂದ್ಯಾವಳಿ’ ಹಾಗೂ ಆರೋಗ್ಯ ಉಚಿತ ಶಿಬಿರ ಹಮ್ಮಿಕೊಂಡಿದೆ. 

ಬೆಳಿಗ್ಗೆ 7 ಗಂಟೆಯಿಂದ ಬಸವೇಶ್ವರನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಆರೋಗ್ಯ ಶಿಬಿರ ನಡೆಯಲಿದೆ. ಉಚಿತವಾಗಿ ಎಕ್ಸ್-ರೇ, ಇಸಿಜಿ, ಜಿಆರ್‌ಬಿಎಸ್, ಎಚ್‌ಬಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಜ್ಞ ವೈದ್ಯರಿಂದಲೂ ಉಚಿತವಾಗಿ ಸಲಹೆಗಳು ದೊರೆಯಲಿವೆ ಎಂದು ಫನಾ ಅಧ್ಯಕ್ಷೆ ಡಾ. ಶೋಭಾ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT