ADVERTISEMENT

ಬೆಂಗಳೂರು: ಚರ್ಚ್‌ಸ್ಟ್ರೀಟ್‌ನಲ್ಲಿ 'ಫ್ರೀ ಕಾಶ್ಮೀರ' ಕೂಗು 

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 9:51 IST
Last Updated 14 ಜನವರಿ 2020, 9:51 IST
'ಫ್ರೀ ಕಾಶ್ಮೀರ' ಬರಹಗಳನ್ನು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅಳಿಸಿ ಹಾಕಿದರು. –ಪ್ರಜಾವಾಣಿ ಚಿತ್ರ
'ಫ್ರೀ ಕಾಶ್ಮೀರ' ಬರಹಗಳನ್ನು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅಳಿಸಿ ಹಾಕಿದರು. –ಪ್ರಜಾವಾಣಿ ಚಿತ್ರ   
""
""
""

ಬೆಂಗಳೂರು: ನಗರದ ಚರ್ಚ್‌ಸ್ಟ್ರೀಟ್‌ನಲ್ಲಿಗೋಡೆಗಳ ಮೇಲೆ 'ಫ್ರೀ ಕಾಶ್ಮೀರ' ಎಂದುಬರೆಯಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆ ಜಾರಿಗೆ ಬೆಂಬಲ ಇಲ್ಲ. ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬರಹಗಳನ್ನು ಬರೆಯಲಾಗಿದೆ.

‘ಬಿಜೆಪಿ ಕ್ಯಾನ್ಸರ್‌ ಇದ್ದಂತೆ. ಅದು ನಿಮ್ಮನ್ನು ಕೊಲ್ಲುವ ಮೊದಲು ನೀವು ಅದನ್ನು ಕೊಲ್ಲಿ. ನಾನು ನನ್ನ ದಾಖಲೆಗಳನ್ನು ತೋರಿಸುವುದಿಲ್ಲ’ ಎಂದು ಬರೆಯಲಾಗಿದೆ.

ADVERTISEMENT

ಘಟನೆ ಸಂಬಂಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಎಂದು ಬರೆಯಲಾಗಿದೆ.
ಸಿಎಎ ಹಾಗೂ ಎನ್‌ಆರ್‌ಸಿಗೆ ಬೆಂಬಲ ಇಲ್ಲ ಎಂದು ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.