
ಪ್ರಜಾವಾಣಿ ವಾರ್ತೆ
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರೋಟರಿ ಬೆಂಗಳೂರು ಪೀಣ್ಯ ಮತ್ತು ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ (BMVSS) ಜೈಪುರ ಇವರ ವತಿಯಿಂದ 28ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್ ಅನ್ನು ಆಯೋಜಿಸುತ್ತಿದೆ.
ಕೃತಕ ಕಾಲು ಮತ್ತು ಪೋಲಿಯೋ ಪೀಡಿತರಿಗಾಗಿ ಕ್ಯಾಲಿಪರ್‌ಗಳು ಹಾಗೂ ಮುಂಗೈ ಜೋಡಣೆಯ ಬೃಹತ್ ಶಿಬಿರ ಇದಾಗಿದೆ. ಅಗತ್ಯ ಇರುವವರು ಇದರ ಈ ಶಿಬಿರದ ಸದುಪಯೋಗ ಪಡೆಯಲು ವಿನಂತಿಸಲಾಗಿದೆ.
2500 ಉಚಿತ ಫಿಟ್ಮೆಂಟ್ ಅನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ 57146 ಜನರು ಪ್ರಯೋಜನ ಪಡೆದಿದ್ದಾರೆ.
2026ರ ಜನವರಿ 3 ರಿಂದ 9ರವರೆಗೆ ಶಿಬಿರ ಎರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ವಸಂತ್ ಕುಮಾರ್ ಜಿಆರ್ (9845052554) ಅವರನ್ನು ಸಂಪರ್ಕಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.