ಬೆಂಗಳೂರು: ಗಣೇಶ ಚತುರ್ಥಿ ಅಂಗವಾಗಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೋಮಿಯೋಪತಿ 'ಅರ್ಸೆನಿಕ್ ಅಲ್ಬಮ್-30' ಔಷಧವನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಇದೇ 22ರಂದು ಹಮ್ಮಿಕೊಂಡಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು,' ಈ ಔಷಧವನ್ನು ಹಬ್ಬದ ಅಂಗವಾಗಿ ಏಳು ಲಕ್ಷ ಮಂದಿಗೆ ವಿತರಿಸಲು ಸಮಿತಿ ನಿರ್ಧರಿಸಿದೆ.
ಇದಕ್ಕೆ ಡಾ.ಜಿವಿಸಿ ಹೋಮಿಯೋ ಪತಿ ಸೆಲ್ಫ್ ರಿಲಯನ್ಸ್ ಫೋರಂ ಸಂಸ್ಥೆ ಕೈಜೋಡಿಸಿದೆ. ಔಷಧ ಪಡೆಯಲು ಇಚ್ಛಿಸುವವರು 9380760925 ಸಂಖ್ಯೆಗೆ ಸಂದೇಶ ಕಳುಹಿಸಬಹುದು' ಎಂದು ಮಾಹಿತಿ ನೀಡಿದರು.
‘ಕೊರೊನಾ ಕಾರಣಕ್ಕೆ ಈ ಬಾರಿಯ ಗಣೇಶ ಚತುರ್ಥಿ ಆಚರಣೆಗೆ ಪಾಲಿಕೆ ಸೂಚಿಸಿರುವ ಎಲ್ಲ ನಿಯಮಗಳನ್ನು ಗಣೇಶೋತ್ಸವ ಸಮಿತಿಗಳು ಪಾಲಿಸಬೇಕು. ಹಬ್ಬದ ವೇಳೆ ಸಾಮೂಹಿಕ ಮೆರವಣಿಗೆಗಳನ್ನು ನಡೆಸದಿರಲು ಸಮಿತಿ ನಿರ್ಧರಿಸಿದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.