ADVERTISEMENT

ಜೈಲಿನಲ್ಲಿದ್ದ ಕೈದಿಗಳಿಗೆ ಗಾಂಜಾ ಕೊರಿಯರ್‌: ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 20:06 IST
Last Updated 1 ಜನವರಿ 2022, 20:06 IST
   

ಬೆಂಗಳೂರು: ಜೈಲಿನಲ್ಲಿದ್ದ ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಅಪರಿಚಿತ ವ್ಯಕ್ತಿಗಳು ಕೊರಿಯರ್‌ ಮೂಲಕ ಗಾಂಜಾ ಕಳುಹಿಸಿದ್ದು, ಈ ಬಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಯೊಬ್ಬರು ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.

‘2021ರ ಡಿ. 25ರಂದು ವಿಚಾರ ಣಾಧೀನ ಕೈದಿಗಳಾದ ಕರಿಯಪ್ಪ ಹಾಗೂ ಅಭಿಷೇಕ್‌ ಎಂಬುವರ ಹೆಸರಿಗೆ ಪಾರ್ಸೆಲ್‌ ಬಂದಿತ್ತು. ಅಂಚೆ ಸಿಬ್ಬಂದಿಯೊಬ್ಬರು ಕಾರಾಗೃಹದ ಮುಖ್ಯ ದ್ವಾರದ ಬಳಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅವುಗಳನ್ನು ತಲುಪಿಸಿ ಹೋಗಿದ್ದರು. ಅನುಮಾನ ಮೂಡಿದ್ದರಿಂದ ಅವುಗಳನ್ನು ತೆರೆದು ನೋಡಲಾಗಿತ್ತು. ಕರಿಯಪ್ಪ ಹೆಸರಿಗೆ ಬಂದಿದ್ದ ಪಾರ್ಸೆಲ್‌ನಲ್ಲಿ 10 ಗ್ರಾಂ ಹಾಗೂ ಅಭಿಷೇಕ್‌ ಹೆಸರಿಗೆ ಬಂದಿದ್ದ ಪಾರ್ಸೆಲ್‌ನಲ್ಲಿ 150 ಗ್ರಾಂ ಗಾಂಜಾ‍ಪತ್ತೆಯಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಇಬ್ಬರು ಕೈದಿಗಳನ್ನೂ ವಿಚಾರಣೆಗೆ ಒಳಪಡಿಸಿಗಾಂಜಾ ಕಳುಹಿಸಿರುವವರ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಿ ದ್ದೆವು. ಅವರು ನಮ್ಮ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಲಿಲ್ಲ ಎಂದೂ ದೂರಿನಲ್ಲಿ ಹೇಳಲಾಗಿದೆ. ಆರೋಪಿಗಳು ಸಿಸಿಟಿವಿ ಕ್ಯಾಮೆರಾ
ಗಳಿಲ್ಲದ ಅಂಚೆ ಕಚೇರಿ ಗುರುತಿಸಿ ಅಲ್ಲಿಂದ ಗಾಂಜಾ ಕೊರಿಯರ್‌ ಮಾಡಿರುವ ಸಾಧ್ಯತೆ ಇದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.